×
Ad

ಇಸ್ರೇಲ್ ವಿರುದ್ಧ ಜಾಗತಿಕವಾಗಿ ಭುಗಿಲೆದ್ದ ಆಕ್ರೋಶ | ಇಟಲಿ, ಸ್ಪೇನ್ ನಲ್ಲಿ ಫೆಲೆಸ್ತೀನ್‌ ಪರ ಮೆರವಣಿಗೆ : ಲಕ್ಷಾಂತರ ಮಂದಿ ಭಾಗಿ

Update: 2025-10-05 13:06 IST

Photo credit: AP

ಬಾರ್ಸಿಲೋನಾ : ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ಇಟಲಿ ಮತ್ತು ಸ್ಪೇನ್ ದೇಶದಲ್ಲಿ ಲಕ್ಷಾಂತರ ಮಂದಿ ಬೀದಿಗಿಳಿದು ಮೆರವಣಿಗೆ ನಡೆಸಿದ್ದಾರೆ.

ಬಾರ್ಸಿಲೋನಾದಿಂದ ಹೊರಟಿದ್ದ ಮಾನವೀಯ ನೆರವು ಹಡಗನ್ನು ತಡೆದ ನಂತರ ಇಸ್ರೇಲ್ ವಿರುದ್ಧ ಜಾಗತಿಕವಾಗಿ ಆಕ್ರೋಶ ಹೆಚ್ಚಾಗಿದೆ. ದಕ್ಷಿಣ ಯುರೋಪ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ರೋಮ್, ಬಾರ್ಸಿಲೋನಾ ಮತ್ತು ಮ್ಯಾಡ್ರಿಡ್‌ನಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಗಾಝಾ ಶಾಂತಿ ಯೋಜನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿದ ಯೋಜನೆಯ ಕೆಲವು ಅಂಶಗಳನ್ನು ಹಮಾಸ್ ಒಪ್ಪಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯುದ್ಧವನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಸೂಚಿಸಿದ್ದರು. ಆದರೆ, ಇಸ್ರೇಲ್‌ ನರ ಹತ್ಯೆಯನ್ನು ಮುಂದುವರಿಸಿದೆ.

ಪ್ರತಿಭಟನೆಯಲ್ಲಿ 2,50,000 ಜನರು ಭಾಗವಹಿಸಿದ್ದರು ಎಂದು ರೋಮ್ ಪೊಲೀಸರು ತಿಳಿಸಿದ್ದಾರೆ. ಸಂಘಟಕರು ಪ್ರತಿಭಟನೆಯಲ್ಲಿ 10 ಲಕ್ಷ ಮಂದಿ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ. ಇಟಲಿಯಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ 1,00,000 ಜನರು ಮತ್ತು ಬಾರ್ಸಿಲೋನಾ ನಗರದಲ್ಲಿ 70,000 ಜನರು ಫೆಲೆಸ್ತೀನ್ ಪರ ಮೆರವಣಿಗೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News