×
Ad

ಮಧ್ಯಪ್ರಾಚ್ಯದಲ್ಲಿನ ಮಿಲಿಟರಿ ದಾಳಿಗಳಿಗೆ ಸುಮಾರು 200 ಮಕ್ಕಳು ಬಲಿ: UNICEF

Update: 2026-03-06 11:57 IST

ಸಾಂದರ್ಭಿಕ ಚಿತ್ರ | Photo Credit : PTI

ಟೆಹ್ರಾನ್: ವಾರಾಂತ್ಯದಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಮಿಲಿಟರಿ ದಾಳಿಗಳ ಪರಿಣಾಮವಾಗಿ ಸುಮಾರು 200 ಮಕ್ಕಳು ಮೃತಪಟ್ಟಿದ್ದಾರೆ ಎಂದು UNICEF ತಿಳಿಸಿದೆ.

UNICEF ನೀಡಿದ ಮಾಹಿತಿಯ ಪ್ರಕಾರ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಮಿಲಿಟರಿ ದಾಳಿಗಳ ಬಳಿಕ ಮಧ್ಯಪ್ರಾಚ್ಯದ ವಿವಿಧ ಭಾಗಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿದೆ.

ಇರಾನ್‌ನಲ್ಲಿ ಕನಿಷ್ಠ 181 ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಲೆಬನಾನ್‌ನಲ್ಲಿ ಏಳು ಮಕ್ಕಳು, ಇಸ್ರೇಲ್‌ನಲ್ಲಿ ಮೂರು ಮಕ್ಕಳು ಹಾಗೂ ಕುವೈತ್‌ನಲ್ಲಿ ಒಂದು ಮಗು ಮೃತಪಟ್ಟಿದೆ ಎಂದು UNICEF ಹೇಳಿದೆ.

“ಮಕ್ಕಳು ಯುದ್ಧಗಳನ್ನು ಪ್ರಾರಂಭಿಸುವುದಿಲ್ಲ. ಆದರೆ ಯುದ್ಧಗಳ ಅತ್ಯಂತ ಭಾರೀ ಬೆಲೆಯನ್ನು ಅವರೇ ತೆರಬೇಕಾಗುತ್ತದೆ. ಮಧ್ಯಪ್ರಾಚ್ಯದಾದ್ಯಂತ ನಡೆಯುತ್ತಿರುವ ಮಿಲಿಟರಿ ದಾಳಿಗಳು ಈಗಾಗಲೇ ಮಕ್ಕಳ ಮೇಲೆ ವಿನಾಶಕಾರಿ ಪರಿಣಾಮ ಬೀರಿವೆ,” ಎಂದು UNICEF ಹೇಳಿಕೆಯಲ್ಲಿ ತಿಳಿಸಿದೆ.

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಮೊದಲ ದಿನವೇ ದಕ್ಷಿಣ ಇರಾನ್‌ನ ಮಿನಾಬ್ ಪಟ್ಟಣದಲ್ಲಿರುವ ಬಾಲಕಿಯರ ಶಾಲೆಯ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಕನಿಷ್ಠ 175 ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು IRGC ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News