×
Ad

ಪ್ಯಾರಿಸ್: ಜರ್ಮನ್ ಪ್ರವಾಸಿಗನ ಇರಿದು ಹತ್ಯೆ; ಇಬ್ಬರಿಗೆ ಗಾಯ

Update: 2023-12-03 22:14 IST

Photo : PTI 

ಪ್ಯಾರಿಸ್: ಫ್ರಾನ್ಸ್‌ನ ಈಫೆಲ್ ಗೋಪುರದ ಬಳಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ವ್ಯಕ್ತಿಯೊಬ್ಬ ಜರ್ಮನ್ ಪ್ರವಾಸಿಗನನ್ನು ಇರಿದು ಹತ್ಯೆ ಮಾಡಿದ್ದು ಇತರ ಇಬ್ಬರನ್ನು ಗಾಯಗೊಳಿಸಿದ್ದು ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ವರದಿ ಮಾಡಿವೆ.

ಆರೋಪಿಗೆ ಮಾನಸಿಕ ಆರೋಗ್ಯ ಸಮಸ್ಯೆಯಿದ್ದು ಈ ಹಿಂದೆ 2016ರಲ್ಲಿ ಇದೇ ರೀತಿಯ ದಾಳಿಗೆ ವಿಫಲ ಪ್ರಯತ್ನ ನಡೆಸಿದ ಅಪರಾಧಕ್ಕೆ 4 ವರ್ಷದ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದ ಮತ್ತು ಪೊಲೀಸರ ‘ನಿಗಾ ಪಟ್ಟಿ’ಯಲ್ಲಿ ಸೇರಿದ್ದ. ಶನಿವಾರ ರಾತ್ರಿ ಈಫೆಲ್ ಗೋಪುರ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮೇಲೆ ಈತ ದಾಳಿ ನಡೆಸಿ ಒಬ್ಬನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಸಿಯೆನ್ ನದಿಯ ದಡದತ್ತ ತೆರಳಿ ಅಲ್ಲಿ ಸುತ್ತಿಗೆಯಿಂದ ಒಬ್ಬನ ಮೇಲೆ ದಾಳಿ ನಡೆಸಿದ್ದು ಇಬ್ಬರು ಗಾಯಗೊಂಡಿದ್ದಾರೆ. ಬಳಿಕ ಆತನನ್ನು ಬೆನ್ನಟ್ಟಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಫ್ಘಾನ್ ಮತ್ತು ಗಾಝಾದಲ್ಲಿ ಮುಸ್ಲಿಮರ ಹತ್ಯೆಯಾಗುತ್ತಿರುವುದನ್ನು ಖಂಡಿಸಿ ಈ ದಾಳಿ ನಡೆಸಿರುವುದಾಗಿ ಆರೋಪಿ ಹೇಳಿದ್ದಾನೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News