ಯೆಮನ್ | ಇಸ್ರೇಲ್ ದಾಳಿಯಲ್ಲಿ ಹೌತಿ ಸರಕಾರದ ಪ್ರಧಾನಿ, ಹಲವು ಸಚಿವರು ಮೃತ್ಯು : ವರದಿ
Update: 2025-08-31 11:28 IST
ಅಹ್ಮದ್ ಅಲ್-ರಹಾವಿ (Photo credit: X/@PalestineChron)
ಸನಾ: ಯೆಮನ್‌ನ ರಾಜಧಾನಿ ಸನಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹೌತಿ ಆಡಳಿತದ ಸರಕಾರದ ಪ್ರಧಾನಿ ಮತ್ತು ಇತರ ಹಲವು ಸಚಿವರು ಮೃತಪಟ್ಟಿದ್ದಾರೆ ಎಂದು ಹೌತಿ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್ ಮುಖ್ಯಸ್ಥ ಮಹ್ದಿ ಅಲ್-ಮಶಾತ್ ಹೇಳಿದ್ದಾರೆ.
ಸನಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೌತಿ ಸರಕಾರದ ಪ್ರಧಾನ ಮಂತ್ರಿ ಅಹ್ಮದ್ ಅಲ್-ರಹಾವಿ ಮೃತಪಟ್ಟಿರುವುದಾಗಿ ಹೌತಿ ದೃಢಪಡಿಸಿದೆ. ಹೌತಿ ಅಧಿಕಾರಿಯೋರ್ವರು ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿಯೂ ಪ್ರತಿಜ್ಞೆ ಮಾಡಿದ್ದಾರೆ.
ಗುರುವಾರ ಹೌತಿ ಸರಕಾರದ ರಕ್ಷಣಾ ಸಚಿವರು ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ.