×
Ad

ಸ್ಕಾಟ್‍ಲ್ಯಾಂಡ್ | ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು

Update: 2024-04-19 22:28 IST

ಸಾಂದರ್ಭಿಕ ಚಿತ್ರ

ಎಡಿನ್‍ಬರ್ಗ್: ಸ್ಕಾಟ್‍ಲ್ಯಾಂಡ್‍ನ ದುಂಡೀ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಜನಪ್ರಿಯ ಪ್ರವಾಸೀ ತಾಣದ ಬಳಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ.

ನಾಲ್ಕು ಮಂದಿ ವಿದ್ಯಾರ್ಥಿಗಳು ಚಾರಣಕ್ಕೆ ತೆರಳಿದ್ದು ಇಬ್ಬರು ಲಿನ್ ಆಫ್ ಟಮೆಲ್ ಜಲಪಾತದ ನೀರಿನಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶ ಮೂಲದವರಾದ ಜಿತೇಂದ್ರನಾಥ್ ಕರುತುರಿ ಮತ್ತು ಚಾಣಕ್ಯ ಬೊಲಿಸೆಟ್ಟಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಿದ್ಯಾರ್ಥಿಗಳ ಕುಟುಂಬದ ಜತೆ ಸಂಪರ್ಕದಲ್ಲಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಭಾರತಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಭಾರತೀಯ ಹೈಕಮಿಷನ್‍ನ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News