×
Ad

ಪತ್ನಿಯ ಜತೆ ನರ್ತಿಸುತ್ತಾ ಕಿಮ್ ಜಾಂಗ್ ಹೇಗಿದ್ದಾರೆ? ಎಂದು ಯೋಧರನ್ನು ಪ್ರಶ್ನಿಸಿದ ಟ್ರಂಪ್

Update: 2025-01-21 20:28 IST

ಕಿಮ್ ಜಾಂಗ್ ,  ಟ್ರಂಪ್  | PC : NDTV 

ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಕ್ಷಣಗಳ ಬಳಿಕ ತನ್ನ ಪತ್ನಿ ಮೆಲಾನಿಯಾ ಟ್ರಂಪ್ ಜತೆ `ಕಮಾಂಡರ್ ಇನ್ ಚೀಫ್ ಬಾಲ್'ಗೆ ಡೊನಾಲ್ಡ್ ಟ್ರಂಪ್ ಆಗಮಿಸಿದಾಗ ಸಭಿಕರು ಎದ್ದುನಿಂತು ಹರ್ಷೋದ್ಘಾರ ಮಾಡುತ್ತಾ ಸ್ವಾಗತಿಸಿದರು.

ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶ್ವೇತಭವನಕ್ಕೆ ಅಧಿಕೃತ ಭೇಟಿಗೂ ಮುನ್ನ ನೂತನ ಅಧ್ಯಕ್ಷರು ಮೂರು ಸಾಂಪ್ರದಾಯಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಾರೆ. ಕಮಾಂಡರ್ ಇನ್ ಚೀಫ್ ಬಾಲ್, ಲಿಬರ್ಟಿ ಇನ್ಯಾಗುಲರ್ ಬಾಲ್ ಮತ್ತು ಸ್ಟಾರ್‍ಲೈಟ್ ಬಾಲ್ ಎಂದು ಹೆಸರಿಸಲಾಗಿರುವ ಈ ಕಾರ್ಯಕ್ರಮಗಳಲ್ಲಿ ತಮ್ಮ ಬೆಂಬಲಿಗರುನ್ನೇದ್ದೇಶಿಸಿ ಅಧ್ಯಕ್ಷರು ಮಾತನಾಡುತ್ತಾರೆ.

ಮಿಲಿಟರಿ ಸೇವೆಗಳ ಸದಸ್ಯರಿಗೆ ಗೌರವ ಸಲ್ಲಿಸುವ `ಕಮಾಂಡರ್ ಇನ್ ಚೀಫ್ ಬಾಲ್'ನಲ್ಲಿ ಪತ್ನಿಯ ಜತೆ ಟ್ರಂಪ್ ಹಾಡಿಗೆ ಹೆಜ್ಜೆ ಹಾಕಿದರು. ಇವರನ್ನು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಅವರ ಪತ್ನಿ ಉಷಾ ವ್ಯಾನ್ಸ್ ಹಾಗೂ ಅಮೆರಿಕದ ಮಿಲಿಟರಿ ಸದಸ್ಯರು ವೇದಿಕೆಯಲ್ಲಿ ಸೇರಿಕೊಂಡರು. `ನಿಮ್ಮ ಕಮಾಂಡರ್ ಇನ್ ಚೀಫ್ ಆಗಿ ಎರಡು ಬಾರಿ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ದೊರಕಿದೆ' ಎಂದು ಮಿಲಿಟರಿ ಸಿಬ್ಬಂದಿಯನ್ನು ಉಲ್ಲೇಖಿಸಿ ಟ್ರಂಪ್ ಹೇಳಿದರು. ಬಳಿಕ ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿರುವ ಅಮೆರಿಕದ ಸೇನಾನೆಲೆಯ ಸಿಬ್ಬಂದಿಗಳ ಜತೆ ವೀಡಿಯೊ ಕಾಲ್ ಮೂಲಕ ಮಾತನಾಡಿದ ಟ್ರಂಪ್ `ಕಿಮ್ ಜಾಂಗ್ ಉನ್ ಹೇಗಿದ್ದಾರೆ ? ಎಂದು ಪ್ರಶ್ನಿಸಿದರು. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಬಗ್ಗೆ ತಮಾಷೆಯಾಗಿ ಮಾತನಾಡಿದ ಟ್ರಂಪ್ `ನಾನು ಅವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ಆದರೆ ಆತ ಕಠಿಣ ಮನುಷ್ಯ' ಎಂದು ನಗುತ್ತಾ ಹೇಳಿರುವುದಾಗಿ `ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News