×
Ad

ಟ್ಯುನೀಷಿಯಾ ವಿಪಕ್ಷ ನಾಯಕನ ಹತ್ಯೆ ಪ್ರಕರಣ: 8 ಮಂದಿಗೆ ಗಲ್ಲು

Update: 2025-02-26 20:59 IST

ಸಾಂದರ್ಭಿಕ ಚಿತ್ರ 

ಟ್ಯೂನಿಸ್: ಟ್ಯುನೀಷಿಯಾದಲ್ಲಿ 2013ರಲ್ಲಿ ಎಡಪಂಥೀಯ ವಿರೋಧ ಪಕ್ಷದ ನಾಯಕ ಮುಹಮ್ಮದ್ ಬ್ರಾಹ್ಮಿ ಹತ್ಯೆ ಪ್ರಕರಣದಲ್ಲಿ 8 ಮಂದಿಗೆ ಟ್ಯುನೀಷಿಯಾದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಟ್ಯುನೀಷಿಯಾದ ಸಾಂವಿಧಾನಿಕ ಅಸೆಂಬ್ಲಿಯ ಸದಸ್ಯರಾಗಿದ್ದ ರಾಷ್ಟ್ರೀಯವಾದಿ ಎಡಪಂಥೀಯ ನಾಯಕ ಬ್ರಾಹ್ಮಿಯನ್ನು 2025ರ ಜುಲೈ 25ರಂದು ಅವರ ಮನೆಯೆದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ 9 ಮಂದಿಯನ್ನು ದೋಷಿಗಳೆಂದು ಗುರುತಿಸಲಾಗಿದ್ದು ತಲೆ ಮರೆಸಿಕೊಂಡಿರುವ ಆರೋಪಿಗೆ ಐದು ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News