×
Ad

ಲೋಕಸಭೆಯಲ್ಲಿ ದಾನಿಶ್ ಅಲಿ ವಿರುದ್ಧ ರಮೇಶ್ ಬಿಧೂರಿ ಕೋಮುವಾದಿ ಹೇಳಿಕೆಗೆ ಯುಎಇ ರಾಜಕುಮಾರಿ ಪ್ರತಿಕ್ರಿಯೆ

Update: 2023-09-23 18:39 IST

Sheikha Hend bint Faisal Al Qasimi| Photo: X

ದುಬೈ: ಲೋಕಸಭೆಯಲ್ಲಿ ಸಂಸದ ಕುನ್ವರ್ ದನಿಶ್ ಅಲಿ ಬಗ್ಗೆ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವಹೇಳನಕಾರಿ ಹೇಳಿಕೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಮನೆತನದ ಸದಸ್ಯೆ ಶೇಖಾ ಹೆಂಡ್ ಬಿಂತ್ ಫೈಸಲ್ ಅಲ್ ಖಾಸಿಮಿ ಪ್ರತಿಕ್ರಿಯಿಸಿದ್ದಾರೆ.

ಅಲ್ ಜಝೀರಾ X ಇಂಗ್ಲೀಷ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋ ಪೋಸ್ಟ್‌ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ರಾಜಕುಮಾರಿ, “ಸಾರ್ವಜನಿಕವಾಗಿ ವಿದೂಷಕರಂತೆ ವರ್ತಿಸುವ ಇವರ ನಾಟಕ ಯಾರಿಗೆ ಬೇಕು?” ಎಂದು ಪ್ರತಿಕ್ರಿಯಿಸಿದ್ದಾರೆ.

ಗುರುವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ, ಬಿಎಸ್‌ಪಿ ಸಂಸದ ಕುನ್ವರ್ ದಾನಿಶ್ ಅಲಿ ವಿರುದ್ಧ ಕೋಮುವಾದಿ ಪದ ಬಳಸಿದ್ದು ವಿವಾದಕ್ಕೆ ಕಾರಣವಾಯಿತು.

ಶೇಖಾ ಹೆಂಡ್ ಬಿಂತ್ ಫೈಸಲ್ ಅಲ್ ಖಾಸಿಮಿ ಅವರ ಪ್ರತಿಕ್ರಿಯೆ ಘಟನೆಯ ಸುತ್ತ ಬೆಳೆಯುತ್ತಿರುವ ಚರ್ಚೆಯನ್ನು ಹೆಚ್ಚಿಸುತ್ತಿದೆ. ಭಾರತದ ಒಳಗೆ ಮತ್ತು ಹೊರಗಿನ ಜನರು ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News