×
Ad

ಕುವೈತ್‌ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ಕ್ಷಿಪಣಿ ದಾಳಿ

Update: 2026-03-06 05:54 IST

ಸಾಂದರ್ಭಿಕ ಚಿತ್ರ |Photo Credit : NDTV 

ಕುವೈತ್:  ಕುವೈತ್ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು Aljazeera ವರದಿ ಮಾಡಿದೆ. 

ದಾಳಿಯನ್ನು ದೇಶದ ವಾಯು ರಕ್ಷಣಾ ಪಡೆಗಳು  ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ ಎಂದು ಕುವೈತ್ ರಕ್ಷಣಾ ಸಚಿವಾಲಯ ತಿಳಿಸಿದೆ. ಕ್ಷಿಪಣಿಯು ಕುವೈತ್‌ನ ವಾಯುಪ್ರದೇಶವನ್ನು ಭೇದಿಸಿದ್ದರೂ ಅದನ್ನು ಮಧ್ಯದಲ್ಲೇ ತಡೆಹಿಡಿಯಲಾಗಿದೆ ಎಂದು ಸಚಿವಾಲಯ ಹೇಳಿದೆ. ತಡೆಹಿಡಿಯಲಾದ ಕ್ಷಿಪಣಿಯ ಅವಶೇಷಗಳು ನೆಲಕ್ಕೆ ಬಿದ್ದ ಪರಿಣಾಮ ಕೆಲವು ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಅಮೆರಿಕದ ಪ್ರಸಾರ ಸಂಸ್ಥೆ ಸಿಬಿಎಸ್ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ, ದಾಳಿಯ ಹಿನ್ನೆಲೆಯಲ್ಲಿ ಕುವೈತ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿ ಮಾಡಿದೆ.

ಇರಾನಿನ ದಾಳಿಯಲ್ಲಿ ಗುರಿಯಾಗಿದ್ದ ಹಿನ್ನೆಲೆಯಲ್ಲಿ ಕುವೈತ್‌ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನು ಈಗಾಗಲೇ ಮುಚ್ಚಲಾಗಿತ್ತು ಎಂದು ತಿಳಿದುಬಂದಿದೆ.

ರಿಯಾದ್‌ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಹಾಗೂ ದುಬೈನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿಯನ್ನೂ ದಾಳಿಗೆ ಗುರಿಯಾಗಿಸಲಾಗಿದೆ ಎಂದು ವರದಿಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News