×
Ad

165 ಮಕ್ಕಳು ಮೃತಪಟ್ಟ ಇರಾನಿನ ಶಾಲೆಯ ಮೇಲಿನ ದಾಳಿಯಲ್ಲಿ ಅಮೆರಿಕದ ಕೈವಾಡ: ವರದಿ

"ಹಾರ್ಮುಜ್ ಜಲಸಂಧಿಯ ನೌಕಾ ನೆಲೆಗಳ ಮೇಲಿನ ದಾಳಿಯೂ ಅಮೆರಿಕದ ಪಡೆಗಳ ಕೃತ್ಯ ಸಾಧ್ಯತೆ"

Update: 2026-03-06 06:08 IST

Photo Credit : aljazeera.com

ಟೆಹ್ರಾನ್: ದಕ್ಷಿಣ ಇರಾನ್‌ ನ ಮಿನಾಬ್ ಪಟ್ಟಣದಲ್ಲಿರುವ ಪ್ರಾಥಮಿಕ ಶಾಲೆಯ ಮೇಲೆ ನಡೆದ ದಾಳಿಗೆ ಅಮೆರಿಕವೇ ಕಾರಣವಾಗಿರಬಹುದೆಂದು ವಿಶ್ಲೇಷಣೆ ಸೂಚಿಸಿದೆ ಎಂದು The Newyork Times ವರದಿ ಮಾಡಿದೆ. ಈ ದಾಳಿಯಲ್ಲಿ ಕನಿಷ್ಠ 165 ಮಂದಿ ಶಾಲಾ ಬಾಲಕಿಯರು ಹಾಗೂ ಸಿಬ್ಬಂದಿ ಮೃತಪಟ್ಟಿದ್ದರು.

The Newyork Times ಪತ್ರಿಕೆಯು ಸಂಗ್ರಹಿಸಿದ ಉಪಗ್ರಹ ಚಿತ್ರಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳು ಮತ್ತು ಪರಿಶೀಲಿಸಲಾದ ವೀಡಿಯೊಗಳ ಆಧಾರದ ಮೇಲೆ, ಇರಾನ್‌ ನ ಕ್ರಾಂತಿಕಾರಿ ಗಾರ್ಡ್‌ಗಳು ನಿರ್ವಹಿಸುವ ಪಕ್ಕದ ನೌಕಾ ನೆಲೆಗಳ ಮೇಲೆ ನಡೆದ ದಾಳಿಯ ಸಮಯದಲ್ಲೇ ನಿಖರ ದಾಳಿಯಿಂದ ಶಾಲಾ ಕಟ್ಟಡ ತೀವ್ರವಾಗಿ ಹಾನಿಗೊಳಗಾಗಿದೆ ಎಂದು ವರದಿ ತಿಳಿಸಿದೆ.

ದಾಳಿಯಲ್ಲಿ ಸಾವನ್ನಪ್ಪಿದ 165 ಮಂದಿ ಶಾಲಾ ಬಾಲಕಿಯರು ಹಾಗೂ ಸಿಬ್ಬಂದಿಗೆ ಇರಾನ್ ಸಾಮೂಹಿಕ ಅಂತ್ಯಕ್ರಿಯೆ ನಡೆಸಿತು. ಆದರೆ ಈ ದಾಳಿಯ ಜವಾಬ್ದಾರಿಯನ್ನು ಅಮೆರಿಕದ ಅಧಿಕಾರಿಗಳು ದೃಢಪಡಿಸಿಲ್ಲ. ಅಮೆರಿಕ ಅಥವಾ ಇಸ್ರೇಲ್ ಸಾರ್ವಜನಿಕವಾಗಿ ದಾಳಿಯ ಹೊಣೆ ಹೊತ್ತಿಲ್ಲ.

The Newyork Times ಪ್ರಕಾರ, ಹಾರ್ಮುಜ್ ಜಲಸಂಧಿಯ ಸಮೀಪದ ನೌಕಾ ಗುರಿಗಳ ಮೇಲಿನ ದಾಳಿಗಳ ಕುರಿತು ಅಮೆರಿಕದ ಅಧಿಕಾರಿಗಳು ನೀಡಿದ ಹೇಳಿಕೆಗಳು, ದಾಳಿಯನ್ನು ಅಮೆರಿಕದ ಪಡೆಗಳು ನಡೆಸಿರುವ ಸಾಧ್ಯತೆ ಹೆಚ್ಚು ಎಂಬುದನ್ನು ಸೂಚಿಸುತ್ತವೆ.

ಅಮೆರಿಕದ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಡಾನ್ ಕೇನ್ ಅವರು ಬ್ರೀಫಿಂಗ್‌ನಲ್ಲಿ ಮಾತನಾಡಿ, ಆ ಸಮಯದಲ್ಲಿ ದಕ್ಷಿಣ ಇರಾನ್‌ ನಲ್ಲಿ ಅಮೆರಿಕದ ಪಡೆಗಳು ದಾಳಿ ನಡೆಸುತ್ತಿದ್ದವು ಎಂದು ಹೇಳಿದ್ದಾರೆ. ಬ್ರೀಫಿಂಗ್ ವೇಳೆ ಪ್ರದರ್ಶಿಸಲಾದ ನಕ್ಷೆಯಲ್ಲಿ ಕಾರ್ಯಾಚರಣೆಯ ಆರಂಭಿಕ ಹಂತದಲ್ಲಿ ಮಿನಾಬ್ ಸೇರಿದಂತೆ ಕೆಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡಿರುವುದನ್ನು ಸೂಚಿಸಲಾಗಿದೆ.

ವರದಿಯ ಪ್ರಕಾರ, ಇಸ್ರೇಲಿ ಪಡೆಗಳು ಹೆಚ್ಚಿನ ಕಾರ್ಯಾಚರಣೆಗಳನ್ನು ಇರಾನ್‌ ನ ಉತ್ತರ ಭಾಗದಲ್ಲಿ ನಡೆಸುತ್ತಿದ್ದವು ಎಂದು ಕೇನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News