×
Ad

ಕಲಬುರಗಿ: ನಾಪತ್ತೆಯಾಗಿದ್ದ ಬಾಲಕ ಸೆಫ್ಟಿಂಕ್ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ

Update: 2024-10-13 20:26 IST

ಕಲಬುರಗಿ: ಸ್ನೇಹಿತರ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿ ಮೂರು ದಿನಗಳ ಬಳಿಕ ಮೃತದೇಹ ಪತ್ತೆಯಾಗಿರುವ ಘಟನೆ ಕಲಬುರಗಿ ನಗರ ಹೊರವಲಯದ ಕೋಟನೂರ (ಡಿ)ಗ್ರಾಮದಲ್ಲಿ ನಡೆದಿದೆ.

ಹೇರೂರು(ಬಿ) ಗ್ರಾಮದ ಶೇಖರ ಶಾಣಪ್ಪ ಹೇರೂರ (10) ಮೃತಪಟ್ಟ ಬಾಲಕ.

ಕೋಟನೂರ(ಡಿ) ಗ್ರಾಮದಲ್ಲಿ ಅಪಾರ್ಟಮೆಂಟ್‌ಗಳ ನಿರ್ಮಾಣಕ್ಕಾಗಿ ಹಾಕಲಾಗಿರುವ ಖಾಲಿ ಲೇಔಟನಲ್ಲಿ ನಿರ್ಮಾಣ ಮಾಡಲಾಗಿದ್ದ ಸೆಪ್ಟಿಂಕ್ ಟ್ಯಾಂಕ್‌ ಒಳಗೆ ಬಾಲಕನ ಮೃತದೇಹ ಪತ್ತೆಯಾಗಿದೆ.

ಮೃತ ಬಾಲಕ ಮೂಲತಃ ಹೇರೂರ (ಬಿ) ಗ್ರಾಮದವರಾಗಿದ್ದು, ಸದ್ಯ ಕೂಲಿ ಕೆಲಸಕ್ಕೆಂದು ತನ್ನ ತಂದೆ ತಾಯಿಯೊಂದಿಗೆ ಬಂದು ಕಲಬುರಗಿಯ ಕೋಟನೂರ (ಡಿ) ಗ್ರಾಮದ ಹತ್ತಿರದಲ್ಲಿ ವಾಸವಾಗಿದ್ದ ಎನ್ನಲಾಗಿದೆ. 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶೇಖರ್, ತನ್ನ ಇಬ್ಬರು ಸಹೋದರರೊಂದಿಗೆ ಆಟವಾಡುತ್ತ ಮನೆಯಿಂದ ಹೊರಹೋದವನು ವಾಪಸ್ ಮನೆಗೆ ಬಾರದೆ ಇರುವುದರಿಂದ ಮೃತನ ತಂದೆ ಶಾಣಪ್ಪ ಅ.12ರಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಘಟನೆ ತಿಳಿದು ವಿವಿ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News