×
Ad

ಪುಸ್ತಕಗಳು ಮಾನವನ ಉತ್ತಮ ಸಂಗಾತಿಗಳು : ಪ್ರೊ.ಕೆ.ಬಿ.ಬಿಲ್ಲವ್

Update: 2024-11-29 22:29 IST

ಕಲಬುರಗಿ : ಪುಸ್ತಕಗಳು ಮಾನವನ ಉತ್ತಮ ಸಂಗಾತಿಗಳಾಗಿದ್ದು, ಅವುಗಳ ಸದುಪಯೋಗಪಡಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಬರಬೇಕಿದೆ ಎಂದು ಶಹಾಬಾದ್‌ ನಗರದ ಎಸ್.ಎಸ್.ಮರಗೋಳ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ಬಿಲ್ಲವ್ ಹೇಳಿದ್ದಾರೆ.

ಅವರು ಶಹಾಬಾದ್‌ ನಗರದಲ್ಲಿ ಎಐಡಿವೈಒ ಸ್ಥಳೀಯ ಸಮಿತಿಯು ಹಮ್ಮಿಕೊಂಡಿದ್ದ ವಿಶೇಷ ಸಂಚಿಕೆಯಾದ ಮಹಿಳೆಯರ ಘನತೆ ಹಾಗೂ ಮಾನವ ಮೌಲ್ಯ ಉಳಿಸಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಒಳ್ಳೆಯ ಸಂಬoಧಗಳು ಹಾಗೂ ಒಳ್ಳೆಯ ವಿಚಾರಗಳು ಮಾನವನಲ್ಲಿ ಕಾಣದೇ ಇರುವುದು ದುರದೃಷ್ಟಕರ ಸಂಗತಿ. ಎಲ್ಲಿ ನೋಡಿದರಲ್ಲಿ ಮೋಸ, ವಂಚನೆ, ಆಡಂಬರ ಜೀವನ, ಕೆಟ್ಟದಕ್ಕೆ ಪ್ರಚೋದನೆ ಮತ್ತು ಮೊಬೈಲ್ ಹಾಗೂ ಟಿವಿಗಳಲ್ಲಿ ಕಲುಷಿತ ವಿಚಾರ, ಅಶ್ಲೀಲ ಚಿತ್ರಗಳು ಸಮಾಜದಲ್ಲಿ ಅಶಾಂತಿ ಸೃಷ್ಠಿಸುತ್ತಿದೆ. ಇಂತಹದರ ಮಧ್ಯೆ ಒಳ್ಳೆಯ ಮೌಲ್ಯಗಳು ಸಿಗುವುದೇ ಪುಸ್ತಕಗಳಲ್ಲಿ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲಿ ಆದಷ್ಟು ಒಳ್ಳೆಯ ಹಲವಾರು ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿಎಐಡಿವೈಓ ಸಂಘಟನೆಯ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಎಚ್., ಪ್ರೊ.ಸುರೇಖಾ ನಾಟೇಕರ್, ಉಪನ್ಯಾಸಕರಾದ ರೇಖಾ ಪಾಟೀಲ್, ಎಐಡಿವೈಓ ಸಂಘಟನೆಯ ಕಾರ್ಯದರ್ಶಿಗಳಾದ ರಮೇಶ್ ದೇವಕರ್, ಉಪನ್ಯಾಸಕರಾದ ಶಿವಕುಮಾರ ಕುಸಾಳೆ, ಸಂಗಮೇಶ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News