×
Ad

ಕಲಬುರಗಿ| ನೆರೆ ಸಂತ್ರಸ್ತರಿಗೆ ಬಿಸ್ಕಟ್, ಚಿಪ್ಸ್ ನೀಡಿದ ಬಾಲಕರು

Update: 2025-09-29 22:21 IST

ಕಲಬುರಗಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಾಗೂ ಭೀಮಾ ನದಿಯ ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲಿ ಜಿಲ್ಲಾಡಳಿತ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಮುಂದಾಗುತ್ತಿದ್ದಾರೆ. ಅದರಂತೆಯೇ ಕಲಬುರಗಿ ನಗರದ ದರ್ಗಾ ಪ್ರದೇಶದ ಕೆಲ ಬಾಲಕರು ಸೇರಿಕೊಂಡು ತಮ್ಮ ಕೈಲಾದಷ್ಟು ಹಣ ಕೂಡಿಸಿಕೊಂಡು ಕೆಲವು ತಿನ್ನುವ ಪದಾರ್ಥಗಳನ್ನು ಅಧಿಕಾರಿಗಳ ಮೂಲಕ ಸಂತ್ರಸ್ತರಿಗೆ ತಲುಪಿಸಿದ್ದಾರೆ.

ನಗರದ ದರ್ಗಾ ಪ್ರದೇಶದ ನಿವಾಸಿಗಳಾದ ಅಮನ್, ಕಮ್ರಾನ್, ಅತೀಫ್, ಇರ್ಫಾನ್ ಶೇಖ್, ರೆಹಮತ್,, ದಿಲಾಶದ ಅವರು, ಕಲಬುರಗಿ ತಾಲೂಕಿನ ಭೀಮಾ ನದಿಯ ಪ್ರವಾಹ ಪೀಡಿತ ಜನರಿಗೆ ಕಲಬುರಗಿ ತಹಸೀಲ್ದಾರ್ ಮೂಲಕ 1000 ಬಿಸ್ಕೆಟ್ ಪಿಕೆಟ್‌ಗಳು ಮತ್ತು 150 ಚಿಪ್ಸ್ ಪಾಕೆಟ್‌ಗಳನ್ನು ಒದಗಿಸಿದ್ದಾರೆ.

ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ದೇವಿಂದ್ರ ನಾಡಗೀರ್, ಎಂಡಿ ಮುನೀರ್, ಮತ್ತು ಸಂತೋಷ ಯಡ್ರಾಮಿ ಮತ್ತಿತ್ತರ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಯವರು ಬಾಲಕರು ನೀಡಿದ ಪೊಟ್ಟಣಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News