×
Ad

ಕಲಬುರಗಿ | ರೈತರ ಪರವಾಗಿ ಕೆಲಸ ಮಾಡಿ: ಸಿದ್ದುಗೌಡ ಅಫಜಲಪೂರಕರ್

Update: 2025-02-19 21:25 IST

ಕಲಬುರಗಿ: ಮರತೂರ ಗ್ರಾಮದ ವ್ಯವಸಾಯ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ರೈತರ ಪರವಾಗಿ ಕೆಲಸ ಮಾಡಿ ಎಂದು ಚಿತ್ತಾಪೂರ ಎಪಿಎಂಸಿ ಮಾಜಿ ಅಧ್ಯಕ ಮುಖಂಡರಾದ ಸಿದ್ದುಗೌಡ ಅಫಜಲಪೂರಕರ್ ಸಲಹೆ ನೀಡಿದರು.

ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಮರತೂರ ಗ್ರಾಮದ ವ್ಯವಸಾಯ ಸರಕಾರಿ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ರೈತ ದೇಶದ ಬೆನ್ನೆಲುಬು ಎಂದು ಹೇಳುತ್ತೆವೆ. ಆತ ದುಡಿದು ಆಹಾರ ಬೆಳೆದರೆ ಮಾತ್ರ ನಮ್ಮ ನಿಮ್ಮ ಜೀವನ ನಡೆಯೋದು. ಆದರೆ ಅಂತಹ ರೈತರು ಸದ್ಯ ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗಳು ಕೈಕೊಡುತ್ತಿದ್ದು, ಮಾಡಿದ ಸಾಲವೂ ತೀರಿಸದಂತಹ ಸ್ಥಿತಿ ಅವರದ್ದಾಗಿದೆ. ಹಾಗಾಗಿ, ಈಗ ವ್ಯವಸಾಯ ಸಹಕಾರಿ ಸಂಘದ ನಿದೇಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅದರ ಸದುಪಯೋಗ ಪಡೆದುಕೊಂಡು ರೈತರ ಪರವಾಗಿ ದುಡಿಯಬೇಕು ಎಂದು ನೂತನ ನಿರ್ದೇಶಕರಿಗೆ ಸಲಹೆ ನೀಡಿದರು.

ಚಿತ್ತಾಪೂರ ಎಪಿಎಂಸಿ ಅಧ್ಯಕ್ಷನಾಗಿದ್ದ ವೇಳೆ ಸಾಕಷ್ಟು ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದೆನೆ. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ಕೊಡಿಸಿದ್ದೆನೆ. ರೈತನ ಮಗನಾಗಿದ್ದರಿಂದ ರೈತಪರ ಕಾಳಜಿ ಹೊಂದಿದ್ದೆನೆ. ಆಗ ನಾನು ಮಾಡಿದ ಒಳ್ಳೆಯ ಕೆಲಸದಿಂದಾಗಿ ಈಗಲೂ ರೈತರು ನಮಗೆ ಕರೆ ಮಾಡಿ, ಅವರ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೆನೆ ಎಂದರು.

ರೈತರ ಪರವಾಗಿ ನಿಂತು, ಸರಕಾರದಿಂದ ಬರುವ ಸೌಲಭ್ಯಗಳನ್ನು ಕೊಡಿಸುವ ಪ್ರಮಾಣಿಕ ಪ್ರಯತ್ನ ಮಾಡಬೇಕು. ಸದ್ಯದಲ್ಲಿಯೇ ತಾಪಂ, ಜಿಪಂ ಚುನಾವಣೆಗಳು ಬರ್ತಿದ್ದು, ಅದಕ್ಕೂ ಕೂಡ ಎಲ್ಲರೂ ಸಿದ್ದರಾಬೇಕು. ಮೀಸಲಾತಿ ಯಾವುದೇ ಬಂದರೂ ಅವರ ಪರವಾಗಿ ಕೆಲಸ ಮಾಡೋಣ. ಸಾಮಾನ್ಯ ಮೀಸಲಾತಿ ಬಂದ್ರೆ ನಾನು ಕಣದಲ್ಲಿ ಇಳಿಯಲು ಸಿದ್ದನಾಗಿದ್ದೆನೆ. ನಮ್ಮ ಮೇಲೆ ಪಕ್ಷದ ಮುಖಂಡರ ಆಶೀರ್ವಾದವೂ ಇದೆ ಎಂದು ಹೇಳಿದರು.

ಹಿರಿಯರಾದ ಹುಣಚಪ್ಪ ಪೂಜಾರಿ ಅವರು ಮಾತನಾಡಿ, ಮರತೂರ ಗ್ರಾಮದ ವ್ಯವಹಾಯ ಸಹಕಾರಿ ಸಂಘದ ಚುನಾವಣೆ ಅತ್ಯಂತ ತುರುಸಿನಿಂದ ಕೂಡಿತ್ತು. ಆದರೂ ಪಟ್ಟು ಬಿಡದೇ ನಮ್ಮವರನ್ನು ಅವಿರೋಧ ಆಯ್ಕೆ ಮಾಡಿದ್ದೆವೆ. ಇದು ನಮ್ಮ ಶ್ರಮಕ್ಕೆ ಸಿಕ್ಕ ಜಯ ಆಗಿದೆ ಎಂದರು. ಮುಖಂಡ ಶೇರ್ ಅಲಿ ಮಾತನಾಡಿ, ಮರತೂರ ಗ್ರಾಮದ ವ್ಯವಸಾಯ ಸರಕಾರಿ ಸಂಘದ ಚುನಾವಣೆಯಲ್ಲಿ ಎರಡು ಗುಂಪುಗಳ ಮಧ್ಯೆ ಪೈಪೋಟಿ ಏರ್ಪಟ್ಟಿತು. ಚುನಾವಣೆಗೂ ನಾನು ಸಿದ್ದರಾಗಿದ್ದೆವು. ಆದರೆ ನಮ್ಮವರು ಅವಿರೋಧವಾಗಿ ಆಯ್ಕೆಯಾದರು. ಇವರ ಆಯ್ಕೆಯಲ್ಲಿ ಕೇವಲ ನನ್ನ ಶ್ರಮ ಮಾತ್ರವಲ್ಲ, ಪ್ರತಿಯೊಬ್ಬ ಮುಖಂಡರ ಶ್ರಮವೂ ಇದೆ ಎಂದ ಅವರು, ಮುಂಬರುವ ಚುನಾವಣೆಗಳನ್ನೂ ಇದೇ ರೀತಿ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು.

ಚಂದ್ರಶೇಖರ ಎಸ್. ಪೊಲೀಸ್ ಪಾಟೀಲ ಮಾತನಾಡಿ, ಯಾವುದೇ ಎಲೆಕ್ಷನ್ಗಳು ಬಂದರೂ ನಾವು ಒಗ್ಗಟ್ಟಿನಲ್ಲಿ ಮಾಡಿದರೆ ಗೆಲುವು ಗ್ಯಾರಂಟಿ. ಈಗ ಮರತೂರ ವ್ಯವಸಾಯ ಸಹಕಾರಿ ಸಂಘದ ನೂತನ ನಿರ್ದೇಶಕರಾದವರು ರೈತರ ಪರವಾಗಿ ಗಟ್ಟಿಧ್ವನಿಯಾಗಿ ನಿಂತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮರತೂರ ಗ್ರಾಮದ ವ್ಯವಸಾಯ ಸಹಕಾರಿ ಸಂಘದ ನೂತನ ನಿರ್ದೇಶಕರಾದ ಮನೋಹರ ಕಂಠಿ, ದತ್ತುಸಿಂಗ್ ಠಾಕೂರ್ ಮತ್ತು ಕುಶಾಲ ಚನಮಗೋಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚುನಾವಣೆಯಲ್ಲಿ ಶ್ರಮಿಸಿದ ಅಫ್ಸರ್ ಅಲಿ, ಹುಣಚಪ್ಪ ಪೂಜಾರಿ ಹಾಗೂ ಸಿದ್ದುಗೌಡ ಅಫಜಲಪೂರಕರ್ ಮತ್ತು ಶೇರ್ ಅಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ ಮೋಕಾಶಿ, ವಿನೋದಕುಮಾರ ಉದಯಕರ್, ರುದ್ರಮುನಿ ಸ್ಥಾವರಮಠ ಹರಸೂರ, ದೇವಾನಂದ ಚನಮಾಗೋಳ, ಅಶೋಕ ಸಾಹುಕಾರ್, ನೀಲಕಂಠ ಚವ್ಹಾಣ್, ಮಹೇಶ ಕಟ್ಟಿಮನಿ, ವಿಜಯಕುಮಾರ ಅಟ್ಟೂರಕರ್, ರುಕ್ಮೋದ್ದಿನ್, ಶಫಿ ಮೋಜನ್, ಶಾಂತಕುಮಾರ ನಾಟೀಕಾರ್ ಇನ್ನಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News