×
Ad

ಒಳಮೀಸಲಾತಿ ಜಾರಿ‌ ಮಾಡಿದರೆ ಉಗ್ರ ಹೋರಾಟ : ಬಂಜಾರ ಸಮುದಾಯದ ಮಠಾಧೀಶರ ಎಚ್ಚರಿಕೆ

Update: 2024-10-23 22:30 IST

ಕಲಬುರಗಿ : ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಒಳಮೀಸಲಾತಿ ಜಾರಿ‌ ಮಾಡಬಾರದು, ಇದರಿಂದ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಜನಾಂಗಕ್ಕೆ ಅನ್ಯಾಯವಾಗುತ್ತದೆ ಎಂದು ಬಂಜಾರ ಸಮುದಾಯದ ಮಠಾಧೀಶರು ಆಕ್ಷೇಪ ವ್ಯಕ್ತಪಡಿಸಿದರು.

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚೌಡಾಪುರದ ಮುರಹರಿ ಮಹಾರಾಜರು, ʼಸುಪ್ರೀಂಕೋರ್ಟ್‌ ಒಳಮೀಸಲಾತಿ ಜಾರಿ‌ಗೊಳಿಸುವ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ನೀಡಿ ಆದೇಶ ಹೊರಡಿಸಿದೆ.‌ ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಕಾಂಗ್ರೆಸ್ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡುವುದಾಗಿ ಗುಮಾನಿ ಎದ್ದಿದ್ದು, ಸರಕಾರ ಯಾವುದೇ ಕಾರಣಕ್ಕೂ ಒಳಮೀಸಲಾತಿ ಜಾರಿಗೆ ಮುಂದಾಗಬಾರದು. ಒಂದು ವೇಳೆ ಮೀಸಲಾತಿ ಜಾರಿ ಮಾಡಿದರೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆʼ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ಯಾಮರಾವ್ ಪವಾರ್, ಖೇಮಸಿಂಗ್ ಮಹಾರಾಜ, ಚಂದು ಜಾಧವ್, ವಿನೋದ್ ಚವ್ಹಾಣ, ಮುರಹರಿ ಮಹಾರಾಜ, ಲತಾಮಾತಾ ಕೇಸರಟಗಿ, ಸುರೇಶ್ ಮಹಾರಾಜರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News