ಕಲಬುರಗಿ | ಸನ್ನಡತೆ ಆಧಾರದಲ್ಲಿ 6 ಕೈದಿಗಳ ಬಿಡುಗಡೆ
Update: 2024-11-28 22:00 IST
ಕಲಬುರಗಿ : ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷ ಶಿಕ್ಷೆ ಅನುಭವಿಸಿದ್ದ 6 ಜನ ಕೈದಿಗಳನ್ನು ಅವರ ಉತ್ತಮ ಕೆಲಸ ಮತ್ತು ಕಾರಾಗೃಹದಲ್ಲಿ ಉತ್ತಮ ನಡವಳಿಕೆ ಪರಿಗಣಿಸಿ ಕಾರಾಗೃಹದ ಸ್ಥಾಯಿ ಸಲಹಾ ಮಂಡಳಿ, ಕಾರಾಗೃಹ ಡಿಐಜಿಪಿ, ಹಾಗೂ ಸರಕಾರದ ಶಿಫಾರಸ್ಸಿನಂತೆ ನ.28ರಂದು ಬಿಡುಗಡೆಗೊಳಿಸಲಾಯಿತು.
ಬಿಡುಗಡೆಯಾದವರಲ್ಲಿ ಐವರು ಪುರುಷರು, ಒಬ್ಬ ಮಹಿಳೆ ಇದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್. ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಿ ಮುಂದಿನ ಜೀವನ ಸುಗಮವಾಗಿ ನಡೆಸಲು ಸಲಹೆ ನೀಡಿ ಶುಭ ಹಾರೈಸಿದರು.
ಬಿಡುಗಡೆಯಾದವರು: ಸಾಬಣ್ಣ ಮರೆಣ್ಣ ಬನಾರ, ಖಾಜಾಸಾಬ ಲಾಲಸಾಬ್, ಶಿವಶಂಕರ ಅಲಿಯಾಸ್ ಶಿವಪ್ಪ, ರವಿ ಬಾಲಪ್ಪ, ಜೈಭಾರತ ಬೀರಪ್ಪ, ಅಬೀದಾ ಬೇಗಂ.