×
Ad

ಕಲಬುರಗಿ | ಉದ್ದಿಮೆದಾರರಾಗಲು ಛಲ, ಆತ್ಮವಿಶ್ವಾಸ ಮುಖ್ಯ : ಸೈಯದ್ ಅಷ್ಪಾಕ್

Update: 2025-03-01 21:49 IST

ಕಲಬುರಗಿ : ಉದ್ದಿಮೆದಾರರಾಗಲು ಛಲ, ಗುರಿ, ಆತ್ಮವಿಶ್ವಾಸ ಹಾಗೂ ಹಂಬಲ ಅತೀ ಮುಖ್ಯವಾದ ಲಕ್ಷಣ ಎಂದು ಕಲಬುರಗಿ ಸಿಡಾಕ್ ಹಿರಿಯ ಸಂಪನ್ಮೂಲ ವ್ಯಕ್ತಿ ಸೈಯ್ಯದ್ ಅಷ್ಪಾಕ್ ಅವರು ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಸಲಹೆ ನೀಡಿದರು.

ಕಲಬುರಗಿ ನಗರದ ಶ್ರೀ ಶರಣ ಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಬೃಹತ್ ʼನಮ್ಮ ಸರಸ್ ಮೇಳ-2025ʼರ ಆರನೇ ದಿನವಾದ ಶನಿವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಒಂದು ವ್ಯಕ್ತಿ ಉದ್ದಿಮೆದಾರರಾಗಬೇಕಾದರೆ ಉದ್ಯಮದ ಆಯ್ಕೆ, ಮಾರುಕಟ್ಟೆ ಸಮೀಕ್ಷೆ ಹಾಗೂ ಯೋಜನಾ ವರದಿಯನ್ನು ತಯಾರು ಮಾಡುವುದು ಅತೀ ಮುಖ್ಯ ಎಂದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಆರ್.ಎಸ್.ಟಿ.ಐ ಸಿಬ್ಬಂದಿ ಅರ್ಜುನ್ ಅವರು ಉದ್ಯಮಶೀಲತೆಯ ಗುಣಲಕ್ಷಣಗಳನ್ನು ಮಹಿಳೆಯರಿಗೆ ಮನದಟ್ಟಾಗುವಂತೆ ತಿಳಿಸಿದರು. ಇನ್ನು ಮಹಿಳೆಯರು ಸ್ವಯಂ ಉದ್ಯೋಗ ಮಾಡುವುದರಿಂದ ಮಹಿಳಾ ಸಬಲೀಕರಣ ಸಾಧ್ಯ. ಸ್ವಾವಲಂಬನೆಯ ಜೀವನ ನಡೆಸುವುದರ ಜೊತೆಗೆ ದೇಶ ಎದುರಿಸುತ್ತಿರುವ ನಿರುದ್ಯೋಗದ ಪಿಡುಗನ್ನು ಹೋಗಲಾಡಿಸಬಹುದು ಎಂದರು. ಕೊನೆಯಲ್ಲಿ ನಾಗಲಕ್ಷ್ಮೀ ಅವರು ತಮ್ಮ ಉದ್ಯಮ ಹಾಗೂ ಅದರ ಅನುಭವಗಳನ್ನು ಹಂಚಿಕೊಂಡರು.

ವಿ.ಟಿ.ಯು ಸ್ಕಿಲ್ ಸೆಂಟರ್‌ ನಿರ್ದೇಶಕಿ ಭೇಟಿ :

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಹಿಳಾ ಸೆಲ್ ಮುಖ್ಯಸ್ಥೆ ಮತ್ತು ವಿ.ಟಿ.ಯು. ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಿರ್ದೇಶಕಿ ಡಾ.ಸಂಧ್ಯಾ ಆರ್‌. ಅನ್ವೇಕರ್ ಅವರು ಶನಿವಾರ ಮೇಳಕ್ಕೆ ಭೇಟಿ ನೀಡಿದ ಹೊಸ ಅತಿಥಿಯಾಗಿದ್ದರು.‌ ಅವರಣದಲ್ಲಿನ ವಿವಿಧ ಮಳಿಗೆಗಳನ್ನು ವೀಕ್ಷಿಸಿದರು.

ಕಲ್ಯಾಣ ಮಂಜುನಾಥ್ ಮ್ಯೂಸಿಕ್ ಗೆ ಕುಪ್ಪಳಿಸಿದ ಜನ :

ವೀಕೆಂಡ್ ಆಗಿರೋದ್ರಿಂದ ಶನಿವಾರ ಸರಸ್ ಮೇಳಕ್ಕೆ ಜನಸಂದಣಿ ಹೆಚ್ಚಾಗಿಯೇ ಇತ್ತು. ಕಲಬುರಗಿ ಜನ ಜೋರಾಗೇ ಶಾಪಿಂಗ್ ಮಾಡಿದರು. ಸಂಜೆ ವೇಳೆ ನಡೆದ ಖ್ಯಾತ ಗಾಯಕ ಕಲ್ಯಾಣ್ ಮಂಜುನಾಥ್ ತಂಡದ ಲೈವ್ ಮ್ಯೂಸಿಕಲ್ ಕಾನ್ಸೆರ್ಟ್ ಗೆ ಕಲಬುರಗಿ ಮಂದಿ ಫಿದಾ ಆಗಿದ್ರು. ಭರ್ಜರಿ ಬೀಟ್ಸ್ ನೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನ ಕುಣಿದು ಕುಪ್ಪಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News