×
Ad

ಕಲಬುರಗಿ | ದಲಿತ ಮಹಿಳೆಯರ ಬಗ್ಗೆ ಯತ್ನಾಳ್‌ ಹೇಳಿಕೆಗೆ ದಲಿತ ಮುಖಂಡ ರವಿ ಗೌರ್ ಖಂಡನೆ

Update: 2025-09-19 23:07 IST

ಕಲಬುರಗಿ : ಬಿಜೆಪಿ ಉಚ್ಛಾಟಿತ ಶಾಸಕ ಬಸವರಾಜ ಪಾಟೀಲ್‌ ಯತ್ನಾಳ್‌ ಅವರು ದಲಿತ ಮಹಿಳೆಯರು ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಲು ಅರ್ಹರಲ್ಲ ಎಂಬ ಹೇಳಿಕೆಗೆ ದಲಿತ ಮುಖಂಡ ರವಿ ಗೌರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯತ್ನಾಳ್‌ ಹೇಳಿಕೆ ಅತ್ಯಂತ ಹೀನಾಯವಾಗಿದ್ದು, ಅಸಂವಿಧಾನಿಕ ಮತ್ತು ಸಮಾಜದಲ್ಲಿ ಅಸಮಾನತೆಯನ್ನು ಬೆಳೆಸುವಂತದ್ದು. ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಧರ್ಮ, ಜಾತಿ, ಲಿಂಗ ಇವುಗಳ ಆಧಾರದ ಮೇಲೆ ಯಾರನ್ನೂ ಬೇರ್ಪಡಿಸಲು ಅವಕಾಶವಿಲ್ಲ. ದಲಿತ ಮಹಿಳೆಯರ ಗೌರವ ಮತ್ತು ಹಕ್ಕಿಗೆ ಧಕ್ಕೆ ತರುವ ಹೇಳಿಕೆಯನ್ನು ಯತ್ನಾಳ್ ತಕ್ಷಣ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಚಾಮುಂಡೇಶ್ವರಿ ದೇವಿಯನ್ನು ಶೂದ್ರ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಸಹ ಭಕ್ತಿಯಿಂದ ಪೂಜಿಸುತ್ತಲೇ ಬಂದಿದ್ದಾರೆ. ಭಕ್ತಿಯಿಂದ ಹರಕೆ, ಕಾಣಿಕೆ ಸಲ್ಲಿಸುವ ಹಕ್ಕನ್ನು ಯಾರೂ ನಿರಾಕರಿಸಲಾರರು ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News