ಕಲಬುರಗಿ | ದರ್ಗಾದಲ್ಲಿ ಇಟ್ಟಿದ್ದ ಬಂಗಾರದ ಆಭರಣ ಕಳ್ಳತನ
Update: 2025-07-02 20:43 IST
ಕಲಬುರಗಿ: ದರ್ಗಾದಲ್ಲಿ ಇಟ್ಟಿದ್ದ 14 ತೊಲ (140 ಗ್ರಾಂ) ಬಂಗಾರದ ಆಭರಣ ಕಳವಾದ ಘಟನೆ ಅಫಜಲಪುರ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿರುವ ಹಜರತ್ ಲಾಲಸಾಹೆಬ್ ಮೌಲಾಲಿ ದರ್ಗಾದಲ್ಲಿ ನಡೆದಿದೆ.
ಮೊಹರಂ ಹಬ್ಬದ ಸಂಭ್ರಮ ಇರುವುದರಿಂದ ದೇವರಿಗಾಗಿ ಮೀಸಲಿಟಿದ್ದ ಆಭರಣವನ್ನು ಕಳ್ಳತನ ಮಾಡಲಾಗಿದ್ದು, ಆಭರಣ ಇಟ್ಟಿದ್ದ ಲಾಕರ್ ಮುರಿದು ಕಳ್ಳರು ಬಂಗಾರ ಕಳ್ಳತನ ಮಾಡಿದ್ದಾರೆ.
ದೇವಲ ಗಾಣಗಾಪೂರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೋಲಿಸ್, ಶ್ವಾನದಳ, ಬೆರಳಚ್ಚು ತಜ್ಞರು ಆಗಿಮಿಸಿ ಪರಿಶೀಲನೆ ನಡೆಸಿದ್ದಾರೆ.