ಕಲಬುರಗಿ| ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಕನಕ ಜಯಂತಿ ಆಚರಣೆ
Update: 2025-11-08 19:18 IST
ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಲಬುರಗಿ ವತಿಯಿಂದ ಶನಿವಾರ ಇಲ್ಲಿನ ಕಚೇರಿ ಭವನದಲ್ಲಿ ಭಕ್ತ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಬಳುಂಡಗಿ, ಜಿಲ್ಲಾ ಖಜಾಂಚಿ ಶ್ರೀಮಂತ ಪಟ್ಟೇದಾರ, ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ, ಹಿರಿಯ ಉಪಾಧ್ಯಕ್ಷರಾದ ಎಂ.ಬಿ ಪಾಟೀಲ್, ವಿಭಾಗೀಯ ಉಪಾಧ್ಯಕ್ಷರಾದ ನಿಜಲಿಂಗಪ್ಪ ಕೊರಳ್ಳಿ, ರಾಜ್ಯ ಕ್ರೀಡಾ ಕಾರ್ಯದರ್ಶಿ ಗುರುಲಿಂಗಪ್ಪ ಪಾಟೀಲ್, ಪ್ರಮುಖರಾದ ವೀರಭದ್ರಯ್ಯ ಸ್ವಾಮಿ, ಸುನೀಲಕುಮಾರ ಚಾಂದೆ, ರಾಜಶೇಖರ ಕುರಿಕೊಟಾ, ಅಣವೀರಪ್ಪ ಯಾಕಾಪೂರ, ರೇವಣಸಿದ್ದಪ್ಪ , ಬೀರಬಲ್ ಸಿಂಗ್ ಇತರರು ಉಪಸ್ಥಿತರಿದ್ದರು.