ಕಲಬುರಗಿ | ಕ್ರೂಸರ್ ಮೇಲೆ ಬಿದ್ದ ಲಾರಿ : ತಪ್ಪಿದ ಅನಾಹುತ
Update: 2024-11-29 21:31 IST
ಕಲಬುರಗಿ : ಹತ್ತಿ ಬೀಜ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಆಯತಪ್ಪಿ ಕ್ರೂಸರ್ ಮೇಲೆ ಬಿದ್ದ ಘಟನೆ ಶಹಾಬಾದ್ ನಗರದ ವಾಡಿ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಯಾದಗಿರಿ ಕಡೆಯಿಂದ ಹತ್ತಿ ಬೀಜ ತುಂಬಿಕೊಂಡು ಬರುತ್ತಿದ್ದ ಲಾರಿ ನಗರದ ವಾಡಿ ವೃತ್ತದ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಲ್ಲಿಯೇ ನಿಂತಿದ್ದ ಕ್ರೂಸರ್ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಕ್ರೂಸರ್ ಒಳಗಡೆ ಇದ್ದ ಜನರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.