ಕಲಬುರಗಿ | ಗುಲ್ಬರ್ಗಾ ವಿವಿಯ ಕುಲಸಚಿವರಾಗಿ ಪ್ರೊ.ರಮೇಶ್ ಲಂಡನಕರ್ ನೇಮಕ
ಕಲಬುರಗಿ : ಗುಲ್ಬರ್ಗಾ ವಿಶ್ವವಿದ್ಯಾಲಯದ ಜೀವ ರಸಾಯನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ರಮೇಶ್ ಲಂಡನಕರ್ ಅವರು ಗುಲ್ಬರ್ಗಾ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ನೇಮಕ ಆಗಿದ್ದಾರೆ.
ಸೋಮವಾರ ಎಳ್ಳು ಅಮಾವಾಸ್ಯೆ ದಿನದಂದು ಅವರು ಅಧಿಕಾರ ಸ್ವೀಕಾರ ಮಾಡಿದರು. ಪ್ರೊ.ರಮೇಶ್ ಲಂಡನಕರ್ ಅವರು ಪ್ರಸ್ತುತ ರಾಷ್ಟ್ರೀಯ ಸೇವಾ ಯೋಜನೆಯ ನಿರ್ದೇಶಕರು ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಯಾಗಿಯೂ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಂಶೋಧಕ ಎಂದು ಹೆಸರು ಕೂಡ ಮಾಡಿದ್ದಾರೆ.
ನೂತನ ಕುಲಸಚಿವರಾಗಿ ನೇಮಕಹೊಂದಿರುವ ಹಿನ್ನೆಲೆಯಲ್ಲಿ ಪ್ರೊ.ರಮೇಶ್ ಲಂಡನಕರ್ ಅವರಿಗೆ ಪತ್ರಿಕೋದ್ಯಮ ವಿಭಾಗದ ಅತಿಥಿ ಸಹಾಯಕ ಪ್ರಾಧ್ಯಾಪಕ ಡಾ.ರಾಜಕುಮಾರ ಎಂ.ದಣ್ಣೂರ, ಹೋರಾಟಗಾರ ಡಾ.ಗುಂಡಪ್ಪ ಸಿಂಗೆ, ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಡಾ.ಅರುಣ್ ಕುರನೆ, ಡಾ.ಅಶೋಕ ದೊಡ್ಡಮನಿ ಅಭಿನಂದನೆಗಳು ಸಲ್ಲಿಸಿದ್ದಾರೆ.