ಕಲಬುರಗಿ | ವಿವಿಧ ಕಾಮಗಾರಿಗಳಿಗೆ 1.20 ಕೋಟಿ ರೂ. ಅನುದಾನ ಬಿಡುಗಡೆ: ಡಾ.ಸಾಬಣ್ಣ ತಳವಾರ
ಕಲಬುರಗಿ : ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್‌ನ ಅಡಿಯಲ್ಲಿ ನಿರ್ಮಾಣವಾಗಲಿರುವ ಸ್ವಾಭಿಮಾನಿ ಶ್ರೀ ವಿಠ್ಠಲ್ ಹೇರೂರ ಮೆಟ್ರಿಕ್ ನಂತರದ ಉಚಿತ ವಸತಿ ನಿಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ ಅವರು ಭೂಮಿ ಪೂಜೆ ನೆರವೇರಿಸಿ, ಕಟ್ಟಡ ನಿರ್ಮಾಣಕ್ಕಾಗಿ 30 ಲಕ್ಷ ರೂ. ಅನುದಾನ ಮಂಜೂರು ಮಾಡಿರುವುದಾಗಿ ಘೋಷಿಸಿದರು.
ಕೋಲಿ/ಕಬ್ಬಲಿಗ ಸಮಾಜವು ಕಲಬುರಗಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದುಳಿದ ಸ್ಥಿತಿಯಲ್ಲಿದೆ. ಈ ಸಮುದಾಯದ ವಿದ್ಯಾರ್ಥಿಗಳಿಗೆ ಕಳೆದ ಏಳು ವರ್ಷಗಳಿಂದ ಉಚಿತ ವಸತಿ ನಿಲಯ ಸೇವೆ ನೀಡುತ್ತಿದ್ದು, ಅದರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಈಗಾಗಲೇ ಸಮಾಜದ ವಿವಿಧ ಕಾಮಗಾರಿಗಳಿಗೆ 1.20 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಟ್ರಸ್ಟ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಮುಕ್ಕಾ ಅವರು, ಸುಮಾರು 5 ಕೋಟಿ ರೂ. ವೆಚ್ಚದ ಕಟ್ಟಡ ಮುಂದಿನ ದಿನಗಳಲ್ಲಿ ರಾಜ್ಯದ ಕೋಲಿ/ಕಬ್ಬಲಿಗ ಸಮಾಜಕ್ಕೆ ಶಕ್ತಿ ಕೇಂದ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಶ್ಯಾಮ್ ಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗಿರಿಮಲ್ಲಪ್ಪ ಹರವಾಳ, ವೀರಣ್ಣ ಜಮಾದಾರ್, ಮಲ್ಲಿಕಾರ್ಜುನ ತಳಕೇರಿ, ಸುನಿಲ್ ಕಿನ್ನೂರ, ಚಂದ್ರಶೇಖರ ಕೊಟ್ರಗಸ್ತಿ, ಶರಣಬಸಪ್ಪ ದೊಡ್ಡಮನಿ, ಮಲ್ಲಪ್ಪ ಮನೆಗಾರ, ಯಲ್ಲಪ್ಪ ತಳವಾರ್, ಸಿದ್ದಣ್ಣ ಮುಕುರಂಬಿ, ವಿಜಯ್ ಕುಮಾರ್ ನಾಟಿಕರ್, ಡಾ. ರಾಮಕೃಷ್ಣ ಬಗ್ಗುರಿಗಿ, ಗೀತಾ ಸತೀಶಕುಮಾರ್, ಸೋಮರಾಯ ನಾಗಾವಿ, ನೀಲಕಂಠ ಜಮಾದಾರ, ದೇವೇಂದ್ರ ಚಿಗರಳ್ಳಿ, ಶ್ರೀಮಂತ ಮಾವನೂರ, ಸಂತೋಷ ತೋಟ್ನಳ್ಳಿ, ದಾದಾಸಾಹೇಬ್ ಹೋಸುರ, ಶಿವಶರಣಪ್ಪ ಜಮಾದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಲ್ಲಪ್ಪ ತಳವಾರ್ ನಿರೂಪಿಸಿದರು. ಮಲ್ಲಪ್ಪ ಮಾನೆಗರ್ ಸ್ವಾಗತಿಸಿದರು, ಸಿದ್ದಣ್ಣ ಮರಕುಂಬಿ ವಂದನಾರ್ಪಣೆ ಮಾಡಿದರು ಎಂದು ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ದೊಡ್ಡಮನಿ ತಿಳಿಸಿದ್ದಾರೆ.