ಕಲಬುರಗಿ | ಟಾಟಾ ವಾಹನ ಢಿಕ್ಕಿ : ಪಾದಚಾರಿ ಮಹಿಳೆ ಸ್ಥಳದಲ್ಲೇ ಮೃತ್ಯು
Update: 2025-06-08 20:02 IST
ಸಾಂದರ್ಭಿಕ ಚಿತ್ರ
ಕಲಬುರಗಿ: ರಸ್ತೆ ದಾಟುತ್ತಿದ್ದ ವೇಳೆ ಟಾಟಾ ವಾಹನ ಢಿಕ್ಕಿ ಹೊಡೆದು ಮಹಿಳೆಯೊರ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಗರದ ಸುಲ್ತಾನಪುರರಿಂಗ್ ರೋಡ್ ಕ್ರಾಸ್ ಹತ್ತಿರ ನಡೆದಿದೆ.
ಮೃತರನ್ನು ಚಿಟಗುಪ್ಪಾದ ಲಕ್ಷ್ಮೀ ಚೆನ್ನಪ್ಪ ಹುಗ್ಗಿ (29) ಎಂದು ಗುರುತಿಸಲಾಗಿದೆ.
ಲಕ್ಷ್ಮೀ ಚೆನ್ನಪ್ಪ ಹುಗ್ಗಿ ಅವರು ತಾಜ್ ಸುಲ್ತಾನಪುರದಲ್ಲಿ ಚೌಡೇಶ್ವರಿ ದೇವಿ ಜಾತ್ರೆಗೆ ಪತಿ ಮತ್ತು ಮಕ್ಕಳೊಂದಿಗೆ ಬಂದಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದಾಗ ಹುಮನಾಬಾದ ರಿಂಗ್ ರೋಡ್ ಕಡೆಯಿಂದ ಬಂದ ಈಚರ್ ನಮೂನೆಯ ಟಾಟಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸಂಚಾರ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.