ಕಲಬುರಗಿ | ಜಾತ್ರೆಗೆ ಹೋಗಿ ನಾಪತ್ತೆಯಾದ ಬಾಲಕಿ : ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ ಪೊಲೀಸರು
ಕಲಬುರಗಿ : ಇಲ್ಲಿನ ಪ್ರಸಿದ್ಧ ದೇವಗಣಗಾಪುರ ಶ್ರೀ ದತ್ತ ಮಾಹರಾಜರ ಮಾಗ ಉಸ್ತವ ನಿಮಿತ್ತ ನೆರೆದಿದ್ದ ಸಾವಿರಾರು ಭಕ್ತ ಸಾಗರದ ನಡುವೆ ಮಹಾರಾಷ್ಟ್ರದ ಮೂಲದ 14 ವರ್ಷದ ನಾಪತ್ತೆಯಾಗಿದ್ದ ಬಾಲಕಿಯನ್ನು ದೇವಗಣಗಾಪುರ ಪೊಲೀಸರು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.
ಶ್ರೀ ದತ್ತಾತ್ರೆ ದೇವಸ್ಥಾನಕ್ಕೆ ದರ್ಶನಕ್ಕೆ ಬಂದ ಮಹಾರಾಷ್ಟ್ರದ 14 ವರ್ಷದ ಅದಿತಿ ಎಂಬ ಹೆಣ್ಣು ಮಗು ಜನಸಂದಣಿಯಲ್ಲಿ ಕಳೆದುಕೊಂಡಿದ್ದು, ಪೋಷಕರು ಮಗುವನ್ನು ಹುಡುಕಿಕೊಡಲು ಪೊಲೀಸ್ ಠಾಣೆಗೆ ದೂರ ನೀಡಿದ್ದರು, ತಕ್ಷಣ ದೂರು ಸ್ವೀಕರಿಸಿದ ಪೊಲೀಸರು ಕಾರ್ಯಪ್ರವೃತರಾಗಿದ ರಾಹುಲ ಪವಡೆ ಪಿಎಸ್ಐ, ಶಿವಾನಂದ ಕಲ್ಲೂರ, ಸಂಗಣ್ಣ ವಾಲೀಕಾರ, ಪ್ರಭೂ ಪಾಟೀಲ್, ಹೊನ್ನಪ್ಪ ಬಂಡಿ ಅವರು ಮಗುವನ್ನು ಹುಡುಕಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಗ ಉತ್ಸವದ ಕೊನೆಯ ದಿನ ಇಂದು ಮಿನಿ ಕುಂಭಮೇಳದಂತೆ ಕಾಣುತ್ತಿತ್ತು. ಈ ಸಂದರ್ಭದಲ್ಲಿ ವಿಜೃಂಭಣೆ ಯಿಂದ ಮೊಸರು ಗಡಗಿ ಒಡೆಯುವ ಕಾರ್ಯಕ್ರಮ ಹಾಗೂ ದತ್ತ ಮಹಾರಾಜರ ಪಲ್ಲಕ್ಕಿ ಭೀಮಾ ನದಿಗೆ ಹೋಗಿ ಬರುವಂತಹ ಕಾರ್ಯಕ್ಕೆ ಪೊಲೀಸರ ಸಮ್ಮುಖದಲ್ಲಿ ಜರುಗಿತು.