×
Ad

ವೀರ ವನಿತೆ ಓಬವ್ವಳ ಧೈರ್ಯ ಮಾದರಿಯಾಗಬೇಕು : ಸವಿತಾ ನಾಸಿ

Update: 2024-11-11 20:04 IST

ಕಲಬುರಗಿ : ಹೆಣ್ಣು ಮಕ್ಕಳು ಸಮಯ ಬಂದರೆ ದುಷ್ಟರನ್ನು ನಾಶ ಮಾಡಬಲ್ಲಳು, ಅದಕ್ಕೆ ವೀರ ವನಿತೆ ಒನಕೆ ಓಬವ್ವ ನಮಗೆ ಮಾದರಿಯಾಗಿದ್ದಾಳೆ ಎಂದು ಜೇವರ್ಗಿ ಕಾಲೋನಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಉಪನ್ಯಾಸಕಿ ಸವೀತಾ ಬಿ.ನಾಸಿ ಹೇಳಿದ್ದಾರೆ.

ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್, ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ʼವೀರ ವನಿತೆ ಒನಕೆ ಓಬವ್ವ ಜಯಂತಿಯ ಕಾರ್ಯಕ್ರಮʼದಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಕೋಟೆಗೆ ದೊಡ್ಡ ಇತಿಹಾಸವಿದ್ದು, ಅದು ವೀರ ನಾರಿ ಓಬವ್ವಳ ಸಾಹಸ ಗಾಥೆ ಎಂದರು.

ಕಾಲೇಜು ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಲಾಲ್ ಬಿ(ಪ್ರಥಮ), ಅನೀಕಾ ಸುಬಹೇನಿಯಾ(ದ್ವಿತೀಯ) ಸ್ನೇಹಾ ಮತ್ತು ಸೃಷ್ಠಿ (ತೃತೀಯ) ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಾರ್ಯಾಲಯ ಸಹಾಯಕ ನಿರ್ದೇಶಕ ಶಿವಶರಣಪ್ಪ ದನ್ನಿ ಸುರೇಶ ಬಡಿಗೇರ, ತಹಶೀಲ್ದಾರ್ ಪಂಪಣ್ಣಾ, ಶಿವಶರಣಪ್ಪ ಮೂಳೆಗಾಂವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪಾ ಸಾಗನೂರ, ನಂದಿನಿ ಸನ್ಬಾಲ್, ಸಂಪತ್ತ ಒಳಕೇರ, ಅರುಣ ಭರಣಿ, ನರಸಪ್ಪ, ಮಂಜುನಾಥ್ ನಾಲವಾರಕರ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News