×
Ad

ಕಲಬುರಗಿ| ಶಿವಲಿಂಗಪ್ಪ ಹೊಟ್ಕರ್ ಗೆ ಧಾರವಾಡ ವಿವಿಯಿಂದ ಪಿಎಚ್ಡಿ ಪದವಿ

Update: 2025-10-16 19:29 IST

ಕಲಬುರಗಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಸಸ್ಯರೋಗ ಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ, ಪ್ರಾಧ್ಯಾಪಕ ಶಿವಲಿಂಗಪ್ಪ ನಿಂಗಪ್ಪ ಹೊಟ್ಕರ್ ಅವರಿಗೆ ಪಿಎಚ್ಡಿ ಪದವಿ ಘೋಷಿಸಿದೆ.

ಶಿವಲಿಂಗಪ್ಪ ಹೊಟ್ಕರ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್. ಎ ಅಷ್ಟಪುತ್ರೆ ಅವರ ಮಾರ್ಗದರ್ಶನದಲ್ಲಿ " ಶೇಂಗಾದಲ್ಲಿ ಬರುವ ಕಾಂಡಕೊಳೆ ರೋಗ"ದ ಮೇಲೆ ಸಂಶೋಧನೆ ಮಾಡಿ, ಸೆಪ್ಟಂಬರ್ ತಿಂಗಳಲ್ಲಿ ತಮ್ಮ ಪ್ರಬಂಧವನ್ನು ವಿವಿಗೆ ಸಲ್ಲಿಸಿದ್ದಾರೆ.

ಅ.6ರಂದು ವಿವಿಯು ಶಿವಲಿಂಗಪ್ಪ ಹೊಟ್ಕರ್ ಅವರಿಗೆ ಪಿಎಚ್ಡಿ ಪದವಿ ಘೋಷಿಸಿ ಆದೇಶಿಸಿದೆ.

ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಶಿವಲಿಂಗಪ್ಪ ಹೊಟ್ಕರ್ ಅವರು ಧಾರವಾಡ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News