×
Ad

ಉಪ್ಪಳ ಫ್ಲೈ ಓವರ್ ನ್ನು ಕೈಕಂಬಕ್ಕೆ ವಿಸ್ತರಿಸಲು ಆಗ್ರಹಿಸಿ ಧರಣಿ

Update: 2024-11-08 10:55 IST

ಮಂಜೇಶ್ವರ: ಉಪ್ಪಳ ಫ್ಲೈ ಓವರ್ ನ್ನು ಕೈಕಂಬ ತನಕ ವಿಸ್ತರಿಸುವಂತೆ ಒತ್ತಾಯಿಸಿ ಉಪ್ಪಳ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಸಮಿತಿಯ ನೇತೃತ್ವದಲ್ಲಿ ಉಪ್ಪಳ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಗುರುವಾರ ಸಂಜೆ ಧರಣಿ ನಡೆಯಿತು.

ಧರಣಿಯನ್ನು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಕ್ರಿಯಾ ಸಮಿತಿಯ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು.

ಮುಸ್ಲಿಮ್ ಲೀಗ್ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಝೀಝ್, ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಪಿ.ವಿ.ಹನೀಫ್, ಮಂಗಲ್ಪಾಡಿ ಪಂಚಾಯತ್ ಸದಸ್ಯರಾದ ಇಬ್ರಾಹೀಂ ಪೆರಿಂಗಡಿ, ಮೆಹಮೂದ್ ಮಣಿಮುಂಡ, ಬಾಬು ಬಂದ್ಯೋಡು, ಬಿ.ಎಂ.ಮುಸ್ತಫ, ಕರಿಂ ಪೂನಾ, ಮುಹಮ್ಮದ್ ಉಪ್ಪಳ ಗೇಟ್, ಜಾಬಿರ್ ಪತ್ವಾಡಿ ಮತ್ತು ಹರ್ಷಾದ್ ವರ್ಕಾಡಿ ಹಾಗೂ ವಿವಿಧ ಧಾರ್ಮಿಕ, ಸಾಮಾಜಿಕ ,ಸಂಘ ಸಂಸ್ಥೆ ಗಳ ಪ್ರತಿನಿಧಿಗಳು ಬೆಂಬಲ ಸೂಚಿಸಿದರು.

ಸಂಚಾಲಕ ಜಾಬಿರ್ ಪಳ್ಳಂ ಸ್ವಾಗತಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News