×
Ad

ಸಮಾಜಕ್ಕೆ ಆರೆಸ್ಸೆಸ್ ಕೊಡುಗೆ ಏನು? : ಚಿಂತಕಿ ಕೆ.ನೀಲಾ

ಕೋಲಾರ : ಸಂವಿಧಾನ ರಥ ಸಂಚಲನ ಜಾಥಾ ಕಾರ್ಯಕ್ರಮ

Update: 2025-11-27 00:55 IST

ಕೋಲಾರ : ಆರೆಸ್ಸೆಸ್‌ನವರು ಯಾವ ಪುರುಷಾರ್ಥಕ್ಕಾಗಿ ಪಥಸಂಚಲನ ನಡೆಸಿ, ಶತಮಾನೋತ್ಸವ ಆಚರಿಸಿದರು. ಸಮಾಜಕ್ಕೆ ಇವರ ಕೊಡುಗೆ ಏನು? ಎಂದು ಪ್ರಗತಿಪರ ಚಿಂತಕಿ ಕೆ.ನೀಲಾ ಪ್ರಶ್ನಿಸಿದ್ದಾರೆ.

ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂವಿಧಾನ ಸಮರ್ಪಣಾ ದಿನ ಅಂಗವಾಗಿ ನಗರದಲ್ಲಿ ಸಂವಿಧಾನ ರಥ ಸಂಚಲನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುವಾದಿಗಳಿಗೆ ಸಂವಿಧಾನದ ಅಗತ್ಯವಿಲ್ಲ. ನಾವು ಸಂವಿಧಾನವನ್ನು ಉಳಿಸಿ ಗಟ್ಟಿಗೊಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರದ್ದು ಬಿಜೆಪಿ ಸರಕಾರವಲ್ಲ, ಆರೆಸ್ಸೆಸ್ ಸರಕಾರ, ಪ್ರಧಾನಿ ಮೋದಿಯವರು, ನಾಲ್ಕು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಆ ಕಾಯ್ದೆಗಳು ಸಂವಿಧಾನದ ವಿರುದ್ಧದ ಕಾಯ್ದೆಗಳಾಗಿದ್ದು, ರೈತರು, ಕೃಷಿ ಕಾರ್ಮಿಕರು, ದಲಿತ ದಮನಿತರಿಗೆ ಅನ್ಯಾಯವಾಗಿದೆ. ದೇಶದಲ್ಲಿ ಯುವಜನತೆಗೆ ಉದ್ಯೋಗವಿಲ್ಲದೆ ನಿರುದ್ಯೋಗ ನಿರ್ಮಾಣವಾಗಿದೆ. ಆದುದ್ದರಿಂದ ಅಂಬೇಡ್ಕರ್ ನಮಗಾಗಿ ನೀಡಿರುವ ಸಂವಿಧಾನವನ್ನು ನಾವೆಲ್ಲರೂ ಉಳಿಸಬೇಕು. ಆರೆಸ್ಸೆಸ್ ಗುಲಾಮರೆ ದೇಶಕ್ಕಾಗಿ ಸ್ವಾತಂತ್ರಕ್ಕಾಗಿ ನಿಮ್ಮದು ಯಾವುದೇ ಕೊಡುಗೆ ಇಲ್ಲ. ನಿಮ್ಮ ಮಾತು ಎಂದಿಗೂ ನಾವು ಕೇಳುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಸುಗತ್ಪಾಲ ಬಂತೇಜಿ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಸೇರಿದಂತೆ ಹಲವು ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News