×
Ad

ಕೋಲಾರ | ಆಸ್ತಿಗಾಗಿ ಇಬ್ಬರು ಸ್ವಾಮೀಜಿಗಳ ನಡುವೆ ಮಾರಾಮಾರಿ : ಕೊಲೆಯಲ್ಲಿ ಅಂತ್ಯ

Update: 2024-06-22 20:37 IST

ಚಿನ್ಮಯಾನಂದ ಸ್ವಾಮೀಜಿ/ಧರ್ಮ ಪ್ರಾಣಾನಂದ

ಕೋಲಾರ : ಆನಂದಮಾರ್ಗ ಆಶ್ರಮಕ್ಕೆ ಸೇರಿದ ಆಸ್ತಿ ವಿವಾದ ಹಿನ್ನೆಲೆ, ಇಬ್ಬರು ಸ್ವಾಮೀಜಿಗಳ ನಡುವೆ ಮಾರಾಮರಿ ನಡೆದು ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ(76) ಹತ್ಯೆಯಾಗಿದೆ.

ಜಿಲ್ಲೆಯ ಮಾಲೂರು ತಾಲೂಕಿನ ಸಂತಹಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿ ಶನಿವಾರ ಉಭಯ ಸ್ವಾಮೀಜಿಗಳ ಗುಂಪುಗಳ ನಡುವೆ ಆದ ಜಗಳ ಸ್ವಾಮೀಜಿಯೊಬ್ಬರ ಕೊಲೆಯಲ್ಲಿ ಅಂತ್ಯಗೊಂಡಿದೆ.

ಶನಿವಾರ ಬೆಳಗ್ಗೆ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಅದೇ ಆಶ್ರಮದ ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಸಹಚರರು ಸ್ನಾನದ ಕೋಣೆಯಿಂದ ಹೊರಗೆಡೆ ಎಳೆದಾಡಿ ದೋಣ್ಣೆಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.ಇದನ್ನು ಗಮನಿಸಿದ ಆಶ್ರಮದಲ್ಲಿನ ಕೆಲವರು ಕೂಡಲೇ ಗಾಯಗೊಂಡಿದ್ದ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಿದರು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಆನಂದ ಮಾರ್ಗ ಆಶ್ರಮಕ್ಕೆ ಸೇರಿರುವ ಪಾಲಿಟೆಕ್ನಿಕ್​ ಕಾಲೇಜು ಆಸ್ತಿ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ 22 ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಜೂ.24ರಂದು ವಿಚಾರಣೆಯು ಇತ್ತು, ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಆರೋಪಿ ಆಚಾರ್ಯ ಧರ್ಮ ಪ್ರಾಣಾನಂದ ಗುಂಪುಕಟ್ಟಿಕೊಂಡು ಅಗಾಗ ಗಲಾಟೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಆಚಾರ್ಯ ಧರ್ಮ ಪ್ರಾಣಾನಂದ ಮತ್ತು ಆರುಣ್​ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಮಾಲೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News