ಕೋಲಾರ | ಮೊಯ್ಯುದ್ದೀನ್ ರವರ ನೇತೃತ್ವದಲ್ಲಿ ವಿವಿಧ ಯೋಜನೆಯ ಕಾರ್ಡ್‌ಗಳ ಉಚಿತ ವಿತರಣಾ ಶಿಬಿರ
ಕೋಲಾರ : ಸರ್ಕಾರದ ಹಲವು ಯೋಜನೆಗಳನ್ನು ಪಡೆದುಕೊಳ್ಳಲು ಅಗತ್ಯ ಇರುವ ಕಾರ್ಡ್ ಗಳನ್ನು ಸಾರ್ವಜನಿಕರು ಮಾಡಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಮೊಯ್ಯುದ್ಧೀನ್ ಸಲಹೆ ನೀಡಿದ್ದಾರೆ.
ನಗರದ ಸುಲ್ತಾನ್ ತಿಪ್ಪಸಂದ್ರ ಮತ್ತು ಉಸ್ಮಾನ್ ನಗರ ವಾರ್ಡ್ ಸಂಖ್ಯೆ 16 ರ ಸಮಾಜ ಸೇವಕ ಮೊಯ್ಯುದ್ದೀನ್ ರವರ ನೇತೃತ್ವದಲ್ಲಿ ಸುಲ್ತಾನ್ ತಿಪ್ಪಸಂದ್ರದಲ್ಲಿ ನಡೆದ ಜನಜಾಗೃತಿ ಹಾಗೂ ವಿವಿಧ ಯೋಜನೆಗಳ ಕಾರ್ಡ್ ಗಳ ಉಚಿತ ವಿತರಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಸೌಲಭ್ಯಗಳ ಬಗ್ಗೆ ಬಹಳಷ್ಟು ಜನರಿಗೆ ತಿಳುವಳಿಕೆ ಇಲ್ಲದೇ, ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆಯದೆ ವಂಚಿತರಾಗಿದ್ದಾರೆ. ಜನತೆಯಲ್ಲಿ ಜಾಗೃತಿ ಮೂಡಿಸಿ ಅಗತ್ಯವಾದ ಕಾರ್ಡ್ ಗಳನ್ನು ಕೊಡಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಜನಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡುವುದಾಗಿ ತಿಳಿಸಿದರು.
ಈ ವಿಶೇಷ ಶಿಬಿರದಲ್ಲಿ ನೂರಾರು ಜನ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು, ಅಸಂಘಟಿತ ಕಾರ್ಮಿಕರು ನೊಂದಣಿ ಮಾಡಿಸಿಕೊಂಡು ಲೇಬರ್ ಕಾರ್ಡ್ (ಈಶ್ರಮ್ ಕಾರ್ಡ್) ಮತ್ತು ಉಚಿತ ಆರೋಗ್ಯ ಪಡೆದುಕೊಳ್ಳಲು ಆಯುಷ್ಮಾನ್ ಭಾರತ್ ಕಾರ್ಡ್ ಹಾಗೂ ವೋಟರ್ ಐಡಿಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಜಿಲ್ಲಾ ಅಧ್ಯಕ್ಷ ಸಮೀರ್ ಪಾಷಾ, ಜುನೈದ್ ಖಾನ್, ಯುವ ಕಾಂಗ್ರೆಸ್ ಮುಖಂಡರು ಹಾಗೂ ರಾಷ್ಟ್ರೀಯ ಸಂಯೋಜಕರು, ಅಫ್ಸರ್ ಖಾನ್, ಎಂ.ಬಿ. ಶಮ್ಸ್, ಮುಸದ್ದಿಯಕ್, ಅಬ್ದುಲ್ ಸಾಧಿಕ್, ಅಝೀಮ್, ಇರ್ಷಾದ್, ರಿಯಾಝ್, ಮುಂತಾದವರು ಉಪಸ್ಥಿತರಿದ್ದರು.