ಕೋಲಾರ | ನವ ವಿವಾಹಿತ ಇನ್ಫೋಸಿಸ್ ಉದ್ಯೋಗಿ ಆತ್ಮಹತ್ಯೆ
Update: 2024-06-18 12:13 IST
ಹರೀಶ್ (28)
ಕೋಲಾರ : ನವ ವಿವಾಹಿತ ಇನ್ಫೋಸಿಸ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತ ಯುವಕನನ್ನು ಹರೀಶ್ (28) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳ ಹಿಂದಷ್ಟೇ ದೇವನಹಳ್ಳಿ ಮೂಲದ ಹುಡುಗಿಯೊಂದಿಗೆ ವಿವಾಹ ನಡೆದಿತ್ತು ಎನ್ನಲಾಗಿದೆ. ಮಂಗಳವಾರ ಬೆಳಗಿನಜಾವ ಕೆಲಸ ಮುಗಿಸಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ನಿಖರ ಕರಣ ತಿಳಿದುಬಂದಿಲ್ಲ, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.