×
Ad

ಕೋಲಾರ: ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

Update: 2023-11-28 20:50 IST

ಕೋಲಾರ: ಸ್ವಸಹಾಯ ಸಂಘಗಳ ಸಾಲ ತೀರಿಸಲಾಗದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ನಗರದ ಅನ್ಸಾರಿ ಮೊಹಲ್ಲಾದಲ್ಲಿ ಮಂಗಳವಾರ ನಡೆದಿದೆ.

ಡ್ರೈವರ್ ವೃತ್ತಿ ಮಾಡುತ್ತಿದ್ದ ಅನ್ಸಾರಿ ಮೊಹಲ್ಲಾದ ನಿವಾಸಿ 32 ವರ್ಷಗಳ ಸಯದ್ ಫೀರ್ ಮೃತ ವ್ಯಕ್ತಿಯಾಗಿದ್ದು,ತನ್ನ ಹೆಂಡತಿ ಹಿಂದೆ ನಡೆಸುತ್ತಿದ್ದ ಚೀಟಿಗಳ ಹಣವನ್ನು ಚೀಟಿದಾರರು ಸರಿಯಾಗಿ ಕಟ್ಟದ ಕಾರಣ ಸುಮಾರು 6 ಲಕ್ಷ ಗಳಷ್ಟು ಸಾಲ ಮಾಡಿಕೊಂಡಿದ್ದು, ಈ ಸಾಲ ತೀರಿಸಲು ತನ್ನ ಹೆಂಡತಿ ಆರೀಫ್ ಸಿದ್ದಕಿ ನಡೆಸುತ್ತಿದ್ದ ಹಲವು ಸ್ವ ಸಹಾಯ ಸಂಘಗಳಿಂದ ಸಾಲ ಪಡೆದಿದ್ದು,ಪ್ರತಿವಾರ ಹಣ ಕಟ್ಟಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೈಯದ್ ಖಾಸಿಂ ಹಾಗೂ ಸಿಬ್ಬಂದಿ ಭೇಟಿ ನೀಡಿ ಮೃತ ದೇಹವನ್ನು  ಜಾಲಪ್ಪ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News