ಲೋಕಸಭಾ ಚುನಾವಣೆ: ಕೋಲಾರದಲ್ಲಿ ಬಿರುಸಿನ ಮತದಾನ

Update: 2024-04-26 05:03 GMT

ಕೋಲಾರ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಶಂಕರ್ ವಾಣಿಕ್ಯಳ್ ಮತದಾನ ಮಾಡಿದರು.

ಕೋಲಾರ :  18ನೇ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಶುಕ್ರವಾರ ಬೆಳಿಗ್ಗೆ ಕೋಲಾರ ನಗರದ ಮತಗಟ್ಟೆ ಸಂ 103ರಲ್ಲಿ ಸರತಿ ಸಾಲಿನಲ್ಲಿ ನಿಂತು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ ಹಾಗೂ ಸಹಾಯಕ ಜಿಲ್ಲಾ ಚುನಾವಣಾಧಿಕಾರಿ ಶಂಕರ್ ವಾಣಿಕ್ಯಳ್ ಮತದಾನ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬರೂ ಮತ ಚಲಾವಣೆ ಮಾಡಿ ಎಂದು ಕರೆ ನೀಡಿದರು.

ಕೋಲಾರ ‌ಹೊರವಲಯದ ಬಸವನತ್ತ ಗ್ರಾಮದಲ್ಲಿ ಶತಾಯುಷಿ ಮುನಿವೆಂಕಟಪ್ಪ (107) ಯಾರ ಸಹಾಯವೂ ಇಲ್ಲದೆ ಮತಗಟ್ಟೆಗೆ ದಾವಿಸಿ ಮತ ಚಲಾವಣೆ ಮಾಡಿದರು.



 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News