ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಬಿಜೆಪಿ ಮುಖಂಡರಿಂದ ಲೋಕಾಯುಕ್ತಕ್ಕೆ ದೂರು
Update: 2026-01-06 00:13 IST
ಕೋಲಾರ : ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಸ್ವಗ್ರಾಮ ಗರುಡನ ಪಾಳ್ಯದಲ್ಲಿ ಸರಕಾರಿ ಕೆರೆ ಅಂಗಳ ಮತ್ತು ಸ್ಮಶಾನ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ವಿಜಯಕುಮಾರ್ ಹಾಗೂ ಎಸ್.ಎಂ.ಅನಿಲ್ ಕುಮಾರ್ ಲೋಕಾಯುಕ್ತ ತನಿಖೆಗೆ ಒತ್ತಾಯಿಸಿ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ, ಮಾನ್ಯ ಕಂದಾಯ ಸಚಿವರ ಮೇಲೆ ಭೂಕಬಳಿಕೆಯ ಗಂಭೀರ ಆರೋಪ ಇರುವ ಕಾರಣ, ಈ ಕೂಡಲೇ ಸಚಿವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಒಂದು ವೇಳೆ ಲೋಕಾಯುಕ್ತದಲ್ಲೂ ನ್ಯಾಯ ವಿಳಂಬವಾದರೆ ನ್ಯಾಯಾಂಗ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ದೂರುದಾರರು ಲೋಕಾಯುಕ್ತ ಉಪ ಅಧೀಕ್ಷಕರಾದ ವೆಂಕಟೇಶ್ ಅವರಿಗೆ ದೂರು ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ವಿಜಯಕುಮಾರ್, ಅನಿಲ್ ಕುಮಾರ್, ಶಿಳ್ಳಂಗೆರೆ ಮಹೇಶ್, ಇತರರು ಇದ್ದರು.