×
Ad

ಕನಕಗಿರಿ | ಹುಟ್ಟುಹಬ್ಬದಂದೇ ಮೃತಪಟ್ಟ ಯುವಕ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ

ಮೃತನ ಕೈಯಿಂದ ಕೇಕ್ ಕಟ್ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ

Update: 2025-10-24 22:32 IST

ಕನಕಗಿರಿ : ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ 10ನೇ ವಾರ್ಡ್ ನಿವಾಸಿ ಹಾಗೂ ನಟ ಗವಿಸ್ವಾಮಿ ವಸ್ತ್ರದ ಅವರ ಪುತ್ರ ಆರ್ಯನ್(22) ಅವರು ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಅಪಘಾತಕ್ಕೆ ಒಳಗಾಗಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್ಯನ್ ತನ್ನ ಜನ್ಮ ದಿನದಂದೇ ಸಾವನ್ನಪ್ಪಿರುವುದು ಕುಟುಂಬದಲ್ಲಿ ದುಃಖ, ನೋವು ತರಿಸಿದೆ.

ಎರಡು ಕಣ್ಣು, ಎರಡು ಕಿಡ್ನಿ, ಲಿವರ್ ಪ್ರ್ಯಾಂಕ್ರಿಯ್ಸ್, ಹೃದಯದ ಕವಟಗಳನ್ನು ದಾನ ಮಾಡಲಾಗಿದೆ. ಮತ್ತೊಂದು ಜೀವಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮಗನ ಅಂಗಾಂಗಗಳನ್ನು ದಾನ ಮಾಡಲಾಗಿದೆ ಎಂದು ಗವಿಸ್ವಾಮಿ ವಸ್ತ್ರದ ತಿಳಿಸಿದರು.

ಆರ್ಯನ್ ಅವರಿಗೆ ಅಜ್ಜಿ, ತಂದೆ, ತಾಯಿ ಇದ್ದಾರೆ. ಶನಿವಾರ ಮಧ್ಯಾಹ್ನ 12 ಗಂಟೆಗೆ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News