×
Ad

ಜೈಪುರದಲ್ಲಿ ಅರ್ಧಗಂಟೆಯಲ್ಲೇ ಮೂರು ಭೂಕಂಪ; ಜನರಲ್ಲಿ ಆತಂಕ

Update: 2023-07-21 07:48 IST

ಜೈಪುರ: ನಗರದಲ್ಲಿ ಶುಕ್ರವಾರ ಕೇವಲ ಅರ್ಧ ಗಂಟೆ ಅವಧಿಯಲ್ಲಿ ಮೂರು ಬಾರಿ ಭೂಕಂಪದ ಅನುಭವ ಆಗಿದ್ದು, ಜನರು ಆತಂಕಗೊಂಡಿರುವ ಬಗ್ಗೆ ವರದಿಯಾಗಿದೆ.

ಕೊನೆಯ ಭೂಕಂಪ ಮುಂಜಾನೆ 4.25ರ ಸುಮಾರಿಗೆ ಸಂಭವಿಸಿದೆ.10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟಿತ್ತು ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.

ಇದಕ್ಕೂ ಮುನ್ನ ಮುಂಜಾನೆ 4.22ರ ವೇಳೆಗೆ 3.1 ತೀವ್ರತೆಯ ಭೂಕಂಪ 5 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಅದಕ್ಕೂ ಮೊದಲು 10 ಕಿಲೋಮೀಟರ್ ಆಳದಲ್ಲಿ ನಸುಕಿನ ವೇಳೆ 4.09 ಗಂಟೆಗೆ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ತೀವ್ರತೆ 4.4ರಷ್ಟಿತ್ತು ಎನ್ನಲಾಗಿದ್ದು, ಯಾವುದೇ ಹಾನಿ ಅಥವಾ ಸಾವು ನೋವುಗಳ ಬಗ್ಗೆ ವರದಿಗಳು ಬಂದಿಲ್ಲ.

ಈ ಭೂಕಂಪದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ, "ಜೈಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಭೂಕಂಪದ ಅನುಭವ ಆಗಿದೆ. ನೀವೆಲ್ಲರೂ ಸುರಕ್ಷಿತವಾಗಿದ್ದೀರಿ ಎಂಬ ನಂಬಿಕೆ ನನ್ನದು" ಎಂದು ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News