91 ವರ್ಷದ ಸುಬ್ಬಮ್ಮ ಜಸ್ತಿ ದೇಶದ ಅತ್ಯಂತ ಹಿರಿಯ ವಯಸ್ಸಿನ ಬಿಲಿಯಾಧೀಶೆ ; ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ
Photocredit : way2news.com
ಹೊಸದಿಲ್ಲಿ : ಸುಬ್ಬಮ್ಮ ಜಸ್ತಿ ಅವರು ಭಾರತದ ಅತ್ಯಂತ ಹಿರಿಯ ವಯಸ್ಸಿನ ಶತಕೋಟ್ಯಾಧೀಶೆಯೆಂಬ ದಾಖಲೆಗೆ ಪಾತ್ರರಾಗಿದ್ದು, ಫೋರ್ಬ್ಸ್ ಬಿಲಿಯಾಧೀಶರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. 91 ವರ್ಷ ವಯಸ್ಸಿನ ಜಸ್ತಿ ಅವರ ಒಟ್ಟು ಸಂಪತ್ತಿನ ಮೌಲ್ಯ ಎಪ್ರಿಲ್‌ನಲ್ಲಿ 1.1 ಶತಕೋಟಿ ಡಾಲರ್‌ಗೆ ತಲುಪಿದ್ದು, ಆ ಮೂಲಕ ಫೋರ್ಬ್ಸ್ ಬಿಲಿಯಾಧೀಶರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಸುಬ್ಬಮ್ಮ ಜಸ್ತಿ ಅವರು 1989ರಲ್ಲಿ ಸ್ಥಾಪನೆಯಾದ ಸುವೆನ್ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ಸಹಸಂಸ್ಥಾಪಕರಾದ ವೆಂಕಟೇಶ್ವರಲು ಜಸ್ತಿ ಅವರ ತಾಯಿ.
ವೆಂಕಟೇಶ್ವರಲು ಜಸ್ತಿ ಅವರು ಅಮೆರಿಕದ ನ್ಯೂಯಾರ್ಕ್ ಹಾಗೂ ನ್ಯೂಜೆರ್ಸಿಗಳಲ್ಲಿ 1970 ಹಾಗೂ 1980ರ ದಶಕದಲ್ಲಿ ಆರು ಸಾಮುದಾಯಿಕ ಫಾರ್ಮಸಿ ಮಳಿಗೆಗಳನ್ನು ನಡೆಸುತ್ತಿದ್ದರು.
ಸುಬ್ಬಮ್ಮ ಜಸ್ತಿ ಅವರ ಸಂಪತ್ತಿನ ಗಣನೀಯ ಪ್ರಮಾಣವು 2022ರಲ್ಲಿ ಸುವೆನ್ ಫಾರ್ಮಾಸ್ಯುಟಿಕಲ್ಸ್‌ನ ಗಣನೀಯ ಪ್ರಮಾಣದ ಶೇರುಗಳನ್ನು ಆಡ್ವೆಂಟ್ ಇಂಟರ್‌ನ್ಯಾಶನಲ್‌ಗೆ ಮಾರಾಟದಿಂದ ದೊರೆತುದಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸಿದೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ತನ್ನ ಪತಿ ಸುಬ್ಬ ರಾವ್ ಜಸ್ತಿ ನಿಧರಾದ ಬಳಿಕ ಅವರ ಸಂಪತ್ತಿಗೆ ಸುಬ್ಬ ರಾವ್ ಜಸ್ತಿ ಉತ್ತರಾಧಿಕಾರಿಯಾಗಿದ್ದರು.
ಫೋರ್ಬ್ಸ್‌ನ ಜಾಗತಿಕ ಬಿಲಿಯಾಧೀಶರ ಪಟ್ಟಿಯಲ್ಲಿ ಸುಬ್ಬಮ್ಮ ಜಸ್ತಿ ಅವರು 2653ನೇ ರ‍್ಯಾಂಕ್ ನಲ್ಲಿದ್ದಾರೆ.