×
Ad

ವಿಜಯ್ ಅವರ TVK ಪಕ್ಷದ ಮೊದಲ ರಾಜ್ಯ ಸಮ್ಮೇಳನ: 3 ಲಕ್ಷಕ್ಕೂ ಅಧಿಕ ಜನರು ಭಾಗಿ

Update: 2024-10-27 17:15 IST

Screengrab:X/ANI

ತಮಿಳುನಾಡು: ತಮಿಳು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(Tamilaga Vettri Kazhagam) ಮೊದಲ ರಾಜ್ಯ ಸಮ್ಮೇಳನ ತಮಿಳುನಾಡಿನ ವಿಕ್ರವಾಂಡಿಯಲ್ಲಿ ನಡೆಯುತ್ತಿದೆ.

ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ, ನಟ, ರಾಜಕಾರಣಿ ವಿಜಯ್ ಅವರು ತಮಿಳುನಾಡಿನ ವಿಕ್ರವಾಂಡಿಯಲ್ಲಿ 3 ಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ತಮ್ಮ ಆತ್ಮೀಯ ಗೆಳೆಯ ವಿಜಯ್ ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ತಮಿಳಗ ವೆಟ್ರಿ ಕಳಗಂನ ರಾಜ್ಯ ಸಮ್ಮೇಳನವು, ಚಲನಚಿತ್ರ ತಾರೆಯರಾದ ಎಂ ಜಿ ರಾಮಚಂದ್ರನ್, ಜೆ ಜಯಲಲಿತಾ, ವಿಜಯಕಾಂತ್, ಕಮಲ್ ಹಾಸನ್ ಅವರಂತೆ ವಿಜಯ್‌ ಅವರ ರಾಜಕೀಯ ಪಾದಾರ್ಪಣೆಯನ್ನು ಸೂಚಿಸುತ್ತದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News