×
Ad

ಜಾಹೀರಾತು ಕ್ಷೇತ್ರದ ದಿಗ್ಗಜ, ಪದ್ಮಶ್ರೀ ಪುರಸ್ಕೃತ ಪಿಯೂಷ್ ಪಾಂಡೆ ನಿಧನ

Update: 2025-10-24 12:00 IST

ಪಿಯೂಷ್ ಪಾಂಡೆ (Photo: PTI)

ಹೊಸದಿಲ್ಲಿ : ಭಾರತೀಯ ಜಾಹೀರಾತು ಕ್ಷೇತ್ರದ ದಿಗ್ಗಜ ಎಂದು ಕರೆಯಲ್ಪಡುವ ಪದ್ಮಶ್ರೀ ಪುರಸ್ಕೃತ ಪಿಯೂಷ್ ಪಾಂಡೆ ಅವರು ಗುರುವಾರ ನಿಧನರಾದರು.

ಫೆವಿಕಾಲ್ ಹಾಗೂ ವೊಡಾಫೋನ್ ಜಾಹೀರಾತುಗಳಿಗೆ ಹೆಸರುವಾಸಿಯಾದ ಪಾಂಡೆ ಅವರು ಭಾರತದ ಜಾಹೀರಾತು ಕ್ಷೇತ್ರದ ಮುಂಚೂಣಿ ವ್ಯಕ್ತಿಗಳಲ್ಲಿ ಒಬ್ಬರು. ಅವರು ಒಗಿಲ್ವಿ ಇಂಡಿಯಾ ಕಂಪೆನಿಯ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಮತ್ತು ವರ್ಲ್ಡ್‌ವೈಡ್ ಚೀಪ್‌ ಕ್ರಿಯೇಟಿವ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಕ್ಯಾಡ್ಬರಿಯ “ಕುಚ್ ಖಾಸ್ ಹೈ”, ಏಷಿಯನ್ ಪೇಂಟ್ಸ್‌ನ “ಹರ್ ಖುಷಿ ಮೇ ರಂಗ್ ಲಾಯೆ” ಜಾಹೀರಾತಿನಿಂದ ವೊಡಾಫೋನ್ ಜಾಹೀರಾತಿನವೆರೆಗೆ ಅವರ ಜಾಹೀರಾತುಗಳು ಜನಮನದಲ್ಲಿ ಅಚ್ಚಳಿಯದಂತೆ ಉಳಿದಿವೆ.

2014ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ರಚಿಸಿದ “ಅಬ್ ಕಿ ಬಾರ್, ಮೋದಿ ಸರಕಾರ್” ಎಂಬ ಘೋಷಣೆಯು ರಾಜಕೀಯ ಕ್ಷೇತ್ರದಲ್ಲೂ ಬಹಳ ಪ್ರಸಿದ್ಧಿ ಪಡೆದಿದೆ.

ಪಾಂಡೆ ಅವರ ನಿಧನಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News