×
Ad

ಚಂಡೀಗಢ | ಅಪ್ರಾಪ್ತ ಅಥ್ಲೀಟ್ ಮೇಲೆ ಅತ್ಯಾಚಾರ ಆರೋಪ : ಶೂಟಿಂಗ್ ಕೋಚ್ ವಿರುದ್ಧ ದೂರು ದಾಖಲು

Update: 2026-01-08 07:15 IST

ಸಾಂದರ್ಭಿಕ ಚಿತ್ರ | Photo Credit : freepik

ಚಂಡೀಗಢ: ಕಳೆದ ತಿಂಗಳು ಹೋಟೆಲ್ ಕೊಠಡಿಯಲ್ಲಿ 18 ವರ್ಷ ವಯಸ್ಸಿನ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಶೂಟಿಂಗ್ ಕೋಚ್ ಮೇಲೆ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತ ಅಥ್ಲೀಟ್‍ನ ಕುಟುಂಬ ವಿವರವಾದ ಮಾಹಿತಿ ನೀಡಿದ ಬಳಿಕ ಮಂಗಳವಾರ ಎಫ್‍ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಘಟನೆ ನಡೆದ ಸಂದರ್ಭದಲ್ಲಿ ಅಥ್ಲೀಟ್ ಅಪ್ರಾಪ್ತ ವಯಸ್ಸಿನವರಾಗಿದ್ದರು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ಘಟನೆ ಡಿ.16ರಂದು ನಡೆದಿದೆ ಎನ್ನಲಾಗಿದ್ದು, ಹೊಸದಿಲ್ಲಿಯ ಡಾ.ಕರ್ಣಿ ಸಿಂಗ್ ಶೂಟಿಂಗ್ ಅಕಾಡೆಮಿಯಲ್ಲಿ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಗಳು ಕೊನೆಗೊಂಡ ಬಳಿಕ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಆರೋಪಿ ಕೋಚ್, ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಐಆ ನೇಮಕ ಮಾಡಿದ 13 ರಾಷ್ಟ್ರೀಯ ಪಿಸ್ತೂಲ್ ಕೋಚ್‍ಗಲ ಪೈಕಿ ಒಬ್ಬ.

"ಟೂರ್ನಿಯ ಸಾಧನೆ ಪರಾಮರ್ಶೆಯ ನೆಪದಲ್ಲಿ ಫರೀದಾಬಾದ್‍ನ ಸೂರಜ್‍ಕುಂಡ ಹೋಟೆಲ್ ಲಾಬಿಗೆ ನನ್ನನ್ನು ಆಹ್ವಾನಿಸಿದ್ದರು. ಬಳಿಕ ವಿಸ್ಕೃತ ಚರ್ಚೆಗಾಗಿ ಕೊಠಡಿಗೆ ಬರುವಂತೆ ಆಹ್ವಾನಿಸಿದರು. ಕೊಠಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೂ ಬಲವಂತವಾಗಿ ಅತ್ಯಾಚಾರ ಎಸಗಿದರು. ಘಟನೆ ಬಗ್ಗೆ ದೂರು ನೀಡಿದರೆ ವೃತ್ತಿಜೀವನ ನಾಶಪಡಿಸುವ ಬೆದರಿಕೆ ಒಡ್ಡಿದರು" ಎಂದು ಆಪಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News