ವಾರವಿಡೀ ದಾಖಲೆ ನಾಗಾಲೋಟ ಕಂಡು ಶನಿವಾರ ಸಾರ್ವಕಾಲಿಕ ಏರಿಕೆ ಕಂಡ ಚಿನ್ನ
ಬೆಳ್ಳಿ ಮತ್ತು ಪ್ಲಾಟಿನಂ ಬೆಲೆಯಲ್ಲೂ ಏರಿಕೆ
ಸಾಂದರ್ಭಿಕ ಚಿತ್ರ (AI)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಏರಿಕೆ ಕಂಡ ಮೇಲೆ ಸ್ಥಳೀಯ ಮಾರುಕಟ್ಟೆಗಳಲ್ಲೂ ಬೇಡಿಕೆ ಕಂಡುಬಂದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ನಾಲ್ಕನೇ ಶನಿವಾರ ರಜಾ ಇರುವ ಕಾರಣದಿಂದ ವಾರವಿಡೀ ಏರಿಕೆ ಕಂಡ ಚಿನ್ನದ ಬೆಲೆ ಯಥಾಸ್ಥಿತಿ ಕಾಪಾಡಿಕೊಳ್ಳುವ ನಿರೀಕ್ಷೆಯಿತ್ತು. ಆದರೆ ಸೋಮವಾರದಿಂದಲೂ ನಿರಂತರ ಏರಿಕೆಯಾದ ಚಿನ್ನದ ಬೆಲೆ ಶನಿವಾರವೂ ಏರಿಕೆ ಕಂಡಿದೆ. ಹೊಸ ವರ್ಷದ ಅಂಗವಾಗಿ ಚಿನ್ನಾಭರಣ ಖರೀದಿಸುವವರು ಬೆಲೆ ಏರಿಕೆಯಿಂದಾಗಿ ಹಿಂದೇಟು ಹಾಕುವಂತಾಗಿದೆ. ಶುಕ್ರವಾರವೂ ಚಿನ್ನ ಗ್ರಾಮ್ ಮೇಲೆ 77 ರೂ. ವರೆಗೆ ಹೆಚ್ಚಳ ಕಂಡಿದ್ದು, ಇಂದು ಅದಕ್ಕಿಂತಲೂ ಹೆಚ್ಚು ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಏರಿಕೆ ಕಂಡ ಮೇಲೆ ಸ್ಥಳೀಯ ಮಾರುಕಟ್ಟೆಗಳಲ್ಲೂ ಬೇಡಿಕೆ ಕಂಡುಬಂದಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ.
ವೆನುಜೆವೆಲಾ ಮತ್ತು ಅಮೆರಿಕ ನಡುವಿನ ಸಂಘರ್ಷವೂ ಬೆಲೆ ಏರಿಕೆಗೆ ಕೊಡುಗೆ ನೀಡಿದೆ. ವೆನುಜೆವೆಲಾದಲ್ಲಿ ಅಮೆರಿಕವು ತೈಲ ಟ್ಯಾಂಕರ್ಗಳನ್ನು ನಿರ್ಬಂಧಿಸಿ ಸರ್ಕಾರದ ಮೇಲೆ ಒತ್ತಡ ಹೇರಿದೆ. ಆಫ್ರಿಕಾ ರಾಷ್ಟ್ರಗಳ ಸಹಯೋಗದಲ್ಲಿ ನೈಜೀರಿಯಾದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಹೀಗಾಗಿ ಚಿನ್ನ, ಬೆಳ್ಳಿ, ಪ್ಲಾಟಿನಂ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗರಿಷ್ಠ ಮಟ್ಟವನ್ನು ತಲುಪಿವೆ.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು?
ಶನಿವಾರ ಡಿಸೆಂಬರ್ 27ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 14,122 (+120) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,945 (+110) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,592 (+90) ರೂ. ಬೆಲೆಗೆ ತಲುಪಿದೆ.
ಬೆಳ್ಳಿ ಮತ್ತು ಪ್ಲಾಟಿನಂ ಬೆಲೆಯಲ್ಲೂ ಏರಿಕೆ
ಚಿನ್ನದ ಬೆಲೆಗೆ ಪೈಪೋಟಿ ನೀಡಿ ಬೆಳ್ಳಿ ಮತ್ತು ಪ್ಲಾಟಿನಂ ದರಗಳು ಏರಿಕೆ ಕಂಡಿವೆ. ಕಳೆದ ವಾರಗಳಲ್ಲಿ ಬೆಳ್ಳಿ ದರಗಳು ಸರಿಸುಮಾರು ಯಥಾಸ್ಥಿತಿಯನ್ನು ಕಾಪಾಡಿಕೊಂಡಿತ್ತು. ಆದರೆ ಈ ವಾರ ನಿರಂತರವಾಗಿ ದರಗಳು ಗಗನಕ್ಕೇರಿವೆ. ಬೆಂಗಳೂರಿನಲ್ಲಿ ಬೆಳ್ಳೀಯ ದದರ ಪ್ರತಿ ಗ್ರಾಂಗೆ 240.10 ರೂ. ಮತ್ತು ಪ್ರತಿ ಕಿಲೋಗ್ರಾಂಗೆ 2,40,100 ರೂ. ಆಗಿದೆ. ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ 6895 ರೂ. ಮತ್ತು 10 ಗ್ರಾಂಗೆ 68,950 ರೂ ಆಗಿದೆ.
ಭಾರತದಲ್ಲಿ ಇಂದಿನ ಚಿನ್ನದ ದರ
ಡಿಸೆಂಬರ್ 27ರಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 1,41,220 ರೂ.ಗೆ ಏರಿದೆ. ಹಿಂದಿನ ದಿನಕ್ಕೆ ಹೋಲಿಸಿದರೆ 1200 ರೂ. ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ ರೂ. 1,29,450 ಗೆ ಏರಿದ್ದು, 1,100 ಏರಿಕೆ ಕಂಡಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 900 ರೂ. ಗೆ ಏರಿಕೆಯಾಗಿ 1,05,920 ರೂ. ತಲುಪಿದೆ.