×
Ad

ಮೇಘಾಲಯ ಡಿಜಿಪಿ ಹುದ್ದೆಗೇರಿದ ಮೊಟ್ಟಮೊದಲ ಮಹಿಳೆ ಇಡಾಸಿನ್ಹ

Update: 2024-05-12 09:58 IST

ಶಿಲ್ಲಾಂಗ್: ಮೇಘಾಲಯ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಪೊಲೀಸ್ ಮಹಾನಿರ್ದೇಶಕರನ್ನಾಗಿ ಪಡೆದಿದೆ. ರಾಜ್ಯಪಾಲರಾದ ಪಗು ಚೌಹಾನ್ ಅವರು ಇಡಾಸಿನ್ಹ ನಂಗ್ರಗ್ ಅವರನ್ನು ಹೊಸ ಡಿಜಿಪಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಇವರು ಮೇ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಹಾಲಿ ಡಿಜಿಪಿ ಎಲ್.ಆರ್.ಬಿಷ್ಣೋಯಿ ಮೇ 19ರಂದು ನಿವೃತ್ತರಾಗಲಿದ್ದಾರೆ.

"ಎಲ್ಲ ಅಡೆತಡೆಗಳನ್ನು ನಿವಾರಿಸಿ ಇತಿಹಾಸ ನಿರ್ಮಿಸುವ ಮೂಲಕ ಇವರು ನಮ್ಮ ರಾಜ್ಯದ ಮೊದಲ ಬುಡಕಟ್ಟು ಮಹಿಳೆಯಾಗಿ ಅತ್ಯುನ್ನತ ಹುದ್ದೆಗೆ ಏರಲಿದ್ದಾರೆ. ಇದು ಎಲ್ಲರಿಗೂ ಅಪಾರ ಹೆಮ್ಮೆಯ ಕ್ಷಣ" ಎಂದು ಸಿಎಂ ಕೊರ್ನಾಡ್ ಕೆ.ಸಂಗ್ಮಾ ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News