ತಾಂತ್ರಿಕ ದೋಷ | 1 ಗಂಟೆ ವಿಳಂಬವಾಗಿ ಸಂಚರಿಸಿದ ಇಂಡಿಗೊ ವಿಮಾನ
ಸಾಂದರ್ಭಿಕ ಚಿತ್ರ (PTI)
ಇಂದೋರ್: ಇಂದೋರ್ ನಿಂದ ಭುವನೇಶ್ವರಕ್ಕೆ 140 ಮಂದಿಯನ್ನು ಹೊತ್ತು ಸಾಗಬೇಕಿದ್ದ ಇಂಡಿಗೊ ವಿಮಾನದಲ್ಲಿ ಸೋಮವಾರ ತಾಂತ್ರಿಕ ದೋಷ ಕಂಡು ಬಂತು. ಇದರಿಂದ ಈ ವಿಮಾನ ನಿಗದಿತ ವೇಳಾಪಟ್ಟಿಗಿಂತ ಸುಮಾರು 1 ಗಂಟೆ ವಿಳಂಬವಾಗಿ ಹಾರಾಟ ಆರಂಭಿಸಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ.
ಇಂಡಿಗೊ ವಿಮಾನ 6E 6332 ಹಾರಾಟ ಆರಂಭಿಸಲು ರನ್ ವೇಯತ್ತ ಸಾಗುತ್ತಿದ್ದಾಗ ಪೈಲಟ್ ಗಳು ತಾಂತ್ರಿಕ ದೋಷವನ್ನು ಗಮನಿಸಿದರು ಎಂದು ದೇವಿ ಅಹಿಲ್ಯಾಬಾಯಿ ಹೋಲ್ಕರ್ ವಿಮಾನ ನಿಲ್ದಾಣದ ನಿರ್ದೇಶಕ ವಿಪಿನ್ ಕಾಂತ್ ಸೇಥ್ ತಿಳಿಸಿದ್ದಾರೆ.
ಅನಂತರ ವಿಮಾನವನ್ನು ವಿಮಾನ ನಿಲ್ಲಿಸುವ ಸ್ಥಳಕ್ಕೆ ಹಿಂದೆ ತರಲಾಯಿತು. ಎಂಜಿನಿಯರ್ಗಳು ಸಣ್ಣ ತಾಂತ್ರಿಕ ದೋಷವನ್ನು ಸರಿಪಡಿಸಿದ ಬಳಿಕ ವಿಮಾನ ಮತ್ತೆ ಹಾರಾಟ ಆರಂಭಿಸಿತು ಎಂದು ಅವರು ತಿಳಿಸಿದ್ದಾರೆ.
ದುರಸ್ಥಿ ಸಂದರ್ಭ ವಿಮಾನದಲ್ಲಿ ಪ್ರಯಾಣಿಕರು ಇರಲಿಲ್ಲ ಎಂದು ತಾಂತ್ರಿಕ ದೋಷಗಳ ಬಗ್ಗೆ ನಿರ್ದಿಷ್ಟ ವಿವರಗಳನ್ನು ನೀಡದೆ ಸೇಥ್ ತಿಳಿಸಿದ್ದಾರೆ.
ಇಂಡಿಗೊದ ಇಂದೋರ್-ಭುವನೇಶ್ವರ ವಿಮಾನ ನಿಗದಿತ ವೇಳಾಪಟ್ಟಿಯಂತೆ ಸೋಮವಾರ ಬೆಳಗ್ಗೆ 9 ಗಂಟೆಗೆ ಹಾರಾಟ ಆರಂಭಿಸಬೇಕಿತ್ತು. ಆದರೆ, ಅಗತ್ಯದ ದುರಸ್ಥಿ ಮಾಡಿದ ಬಳಿಕ ಬೆಳಗ್ಗೆ 10.16ಕ್ಕೆ ಹಾರಾಟ ನಡೆಸಲು ಸಾಧ್ಯವಾಯಿತು. ವಿಮಾನದಲ್ಲಿ 140 ಜನರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.