ಕೇರಳ | ಸುನ್ನತ್ ಮಾಡುವ ವೇಳೆ ಅರವಳಿಕೆಯಿಂದ 2 ತಿಂಗಳ ಮಗು ಮೃತ್ಯು
Update: 2025-07-07 23:31 IST
ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಧಾರ್ಮಿಕ ಪದ್ಧತಿಯಂತೆ ಸುನ್ನತ್ ಮಾಡುವ ವೇಳೆ ಅರವಳಿಕೆಯಿಂದ 2 ತಿಂಗಳ ಮಗು ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.
“ಸುನ್ನತ್ ಮಾಡಲೆಂದು ಮಗುವಿಗೆ ಅರಿವಳಿಕೆ ನೀಡಿದ ಬಳಿಕ ಅಸ್ವಸ್ಥಗೊಂಡು ಮಗು ಮೃತಪಟ್ಟಿರುವ ಘಟನೆ ಕೋಝಿಕ್ಕೋಡ್ ಜಿಲ್ಲೆಯ ಕಕ್ಕೂರ್‌ನಲ್ಲಿ ನಡೆದಿದೆ. ಮುಸ್ಲಿಂ ಸಮುದಾಯದಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸುನ್ನತ್ ಮಾಡುವುದು ಸಾಮಾನ್ಯವಾಗಿದೆ” ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ವಿ ಮನೋಜ್ ಕುಮಾರ್ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಜನನವಾದ ಎರಡನೇ ವಾರದಲ್ಲಿಯೇ ಮಗುವಿಗೆ ಸುನ್ನತ್ ಮಾಡಿಸಲು ಪೋಷಕರು ಮುಂದಾಗುತ್ತಿದ್ದಾರೆ. ಇದರಿಂದ ಹೆಚ್ಚಿನ ಅಪಾಯವೇನೂ ಇಲ್ಲ’ ಎಂದು ತಿರುವಂತಪುರಂನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.