×
Ad

ಮಹಾರಾಷ್ಟ್ರ| ಟ್ರಂಪ್ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್: ಪ್ರಕರಣ ದಾಖಲು

Update: 2025-10-30 12:49 IST

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಲ್ಲಿ ಆಧಾರ್ ಕಾರ್ಡ್ ಸಿದ್ಧಪಡಿಸಿರುವುದು ಹಾಗೂ ಅದನ್ನು ನಕಲಿ ಮತದಾರರನ್ನು ನೋಂದಣಿಗೆ ಬಳಕೆ ಮಾಡಿಕೊಂಡಿರುವುದನ್ನು ಎನ್ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಸಾಕ್ಷಿ ಸಮೇತ ಪ್ರಸ್ತುತ ಪಡಿಸಿರುವುದನ್ನು ಆಧರಿಸಿ, ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 16ರಂದು ಪತ್ರಿಕಾ ಗೋಷ್ಠಿ ನಡೆಸಿದ್ದ ರೋಹಿತ್ ಪವಾರ್, ನಕಲಿ ಅಂತರ್ಜಾಲ ತಾಣದಲ್ಲಿ ಹೇಗೆ ನಕಲಿ ಆಧಾರ್ ಕಾರ್ಡ್ ಗಳನ್ನು ಸಿದ್ಧಪಡಿಸಲಾಗುತ್ತಿದೆ ಹಾಗೂ ಅವನ್ನು ನಕಲಿ ಮತದಾರರ ಗುರುತಿನ ಚೀಟಿಗಾಗಿ ಬಳಕೆ ಮಾಡಿಕೊಳ್ಳುಲಾಗುತ್ತಿದೆ ಎಂಬುದನ್ನು ಪ್ರಸ್ತುತಪಡಿಸಿದ್ದರು.

ಈ ಪ್ರಸ್ತುತಿಯ ತುಣುಕನ್ನು ಬಿಜೆಪಿ ಸಾಮಾಜಿಕ ಮಾಧ್ಯಮ ಘಟಕದ ಸಹ ಸಂಚಾಲಕ ಧನಂಜಯ್ ವಾಗಸ್ಕರ್ ಕೂಡಾ ಯೂಟ್ಯೂಬ್ ವಾಹಿನಿಯಲ್ಲಿ ವೀಕ್ಷಿಸಿದ್ದರು. ಈ ವಿಡಿಯೊದಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಯೊಬ್ಬರ ವಿರುದ್ಧವೂ ಆರೋಪ ಮಾಡಲಾಗಿತ್ತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಧನಂಜಯ್ ವಾಗಸ್ಕರ್, ಈ ಸಂಬಂಧ ಅಪರಿಚಿತ ದುಷ್ಕರ್ಮಿಗಳು, ಅಂತರ್ಜಾಲ ತಾಣದ ಮಾಲಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News