×
Ad

ಬೆಂಗಳೂರು: 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗದಂತೆ ಪಾಕಿಸ್ತಾನಿಯನ್ನು ತಡೆದ ಪೊಲೀಸ್ ಅಧಿಕಾರಿ

Update: 2023-10-21 11:49 IST

Screengrab: X/@Joydas

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು “ಪಾಕಿಸ್ತಾನ್ ಝಿಂದಾಬಾದ್” ಎಂದು ಘೋಷಣೆ ಕೂಗಬೇಡಿ ಎಂದು ಪಾಕಿಸ್ತಾನಿಯೊಬ್ಬರಿಗೆ ಸೂಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ವೀಡಿಯೊ ವೈರಲ್ ಆಗುತ್ತಿದ್ದಂತೆ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಪ್ರತಿಯೊಬ್ಬರೂ ತಮ್ಮ ಆಯ್ಕೆಯ ತಂಡವನ್ನು ಬೆಂಬಲಿಸಲು ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದು ಕೆಲವರು ಹೇಳಿದ್ದರೆ, ಇನ್ನು ಕೆಲವರು ಭಾರತದಲ್ಲಿರುವಾಗ ಪಾಕಿಸ್ತಾನವನ್ನು ಬೆಂಬಲಿಸಬಾರದು ಎಂದು ವಾದಿಸಿದ್ದು, ಪೊಲೀಸ್ ಅಧಿಕಾರಿಯನ್ನು ಸಮರ್ಥಿಸಿದ್ದಾರೆ.

ಪಾಕಿಸ್ತಾನದ ಜೆರ್ಸಿ ತೊಟ್ಟಿದ್ದ ಅಭಿಮಾನಿಯ ಕಡೆಗೆ ಬಂದ ಪೋಲೀಸ್ ಅಧಿಕಾರಿ "ಪಾಕಿಸ್ತಾನ್ ಝಿಂದಾಬಾದ್" ಘೋಷಣೆಗಳನ್ನು ಕೂಗಬೇಡಿ ಎಂದು ಹೇಳಿದ್ದಾರೆ. ಹಾಗಾದರೆ, ‘ಭಾರತ್ ಮಾತಾ ಕಿ ಜೈ’ ಎಂದು ಕೂಗುವುದು ಸರಿಯೇ ಎಂದು ಆ ಅಭಿಮಾನಿ ಕೇಳಿದ್ದು, ನಾನು ಪಾಕಿಸ್ತಾನದಿಂದ ಬಂದಿದ್ದೇನೆ, ಅಲ್ಲದೆ, ಪಾಕಿಸ್ತಾನವು ಆಡುತ್ತಿದೆ, ನಾನು ಪಾಕ್ ಪರ ಘೋಷಣೆ ಕೂಗದೆ ಇನ್ನೇನು ಮಾಡಲಿ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ timesofindia ಜೊತೆ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿಯೊಬ್ಬರು, "ಆ ಪೊಲೀಸ್ ಅಧಿಕಾರಿಗೆ ನಿರ್ದೇಶನ ನೀಡಿದಂತೆಯೇ ಅವರು ಮಾಡಿದ್ದಾರೆ. ಯಾರದ್ದೇ ಭಾವನೆಗಳನ್ನು ನೋಯಿಸುವ ಇಚ್ಛೆ ಅವರಿಗಿರಲಿಲ್ಲ. ಇತರ ಭಾರತೀಯ ಅಭಿಮಾನಿಗಳೊಂದಿಗಿನ ಸಂಭಾವ್ಯ ಘರ್ಷಣೆ ತಪ್ಪಿಸಲು ಹಾಗೆ ಸೂಚಿಸಲಾಗಿತ್ತು” ಎಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಗಳು ವಿಶ್ವಕಪ್ ಪಂದ್ಯಕ್ಕೂ ಮುನ್ನ ಬಿಗಿ ಬಂದೋಬಸ್ತ್ ಮಾಡಿದ್ದರು. ಪ್ರತಿಭಟನೆಯ ಪ್ರದರ್ಶನವಾಗಿ ಅಭಿಮಾನಿಗಳು ಕಪ್ಪು ಬಟ್ಟೆಗಳನ್ನು ಧರಿಸಬೇಡಿ ಮತ್ತು ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದುಕೊಳ್ಳಬೇಡಿ ಎಂದು ಕೇಳಿಕೊಂಡಿದ್ದರು. ಪೊಲೀಸ್ ಅಧಿಕಾರಿಗಳ ಪ್ರಕಾರ, ಇಸ್ರೇಲ್ - ಫೆಲೆಸ್ತೀನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ಕಾರಣದಿಂದಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.+

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News