×
Ad

ನಿಯಮಗಳ ಉಲ್ಲಂಘನೆ: ಕುಸ್ತಿ ಫೆಡರೇಶನ್ ನ ಹೊಸ ಸಮಿತಿಯನ್ನು ಅಮಾನತು ಮಾಡಿದ ಕ್ರೀಡಾ ಸಚಿವಾಲಯ

Update: 2023-12-24 11:40 IST

Photo: PTI

ಹೊಸದಿಲ್ಲಿ : ಸಂಜಯ್ ಸಿಂಗ್ ನೇತೃತ್ವದ ಕುಸ್ತಿ ಫೆಡರೇಶನ್ ನ ಹೊಸ ಸಮಿತಿಯನ್ನು ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ.

ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳಿಗೆ WFI ಸಂಪೂರ್ಣ ನಿರ್ಲಕ್ಷ್ಯ  ತೋರಿದೆ ಎಂದು ಉಲ್ಲೇಖಿಸಿ ಸಚಿವಾಲಯವು ಡಿಸೆಂಬರ್ 24 ರವಿವಾರದಂದು ತನ್ನ ನಿರ್ಧಾರವನ್ನು ಪ್ರಕಟಿಸಿದೆ.

ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಡಿಸೆಂಬರ್ 21 ರಂದು ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ.

ಇಂತಹ ನಿರ್ಧಾರಗಳನ್ನು ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳಬೇಕು, ಅದಕ್ಕೂ ಮೊದಲು ಕಾರ್ಯಸೂಚಿಗಳನ್ನು ಪರಿಗಣನೆಗೆ ಇರಿಸಬೇಕಾಗುತ್ತದೆ. ಹೊಸದಾಗಿ ಚುನಾಯಿತ ಸಮಿತಿಯು ಕ್ರೀಡಾ ಸಂಹಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಮಾಜಿ ಪದಾಧಿಕಾರಿಗಳ ಸಂಪೂರ್ಣ ನಿಯಂತ್ರಣವನ್ನು ತೋರುತ್ತಿದೆ" ಎಂದು ಕ್ರೀಡಾ ಸಚಿವಾಲಯ ಆರೋಪಿಸಿದೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News