ಮಕರ ಸಂಕ್ರಾಂತಿ ಪ್ರಯುಕ್ತ ತಮ್ಮ ನಿವಾಸದಲ್ಲಿ ಗೋವುಗಳಿಗೆ ಮೇವು ತಿನ್ನಿಸಿದ ಪ್ರಧಾನಿ ಮೋದಿ
Photo: x/@mygovindia
ಹೊಸದಿಲ್ಲಿ: ಮಕರ ಸಂಕ್ರಾಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಗೋವುಗಳಿಗೆ ಮೇವು, ಹುಲ್ಲು ಹಾಗೂ ಬೆಲ್ಲವನ್ನು ತಿನ್ನಿಸಿದರು ಎಂದು ndtv ವರದಿ ಮಾಡಿದೆ.
ಇದಕ್ಕೂ ಮುನ್ನ, ಪೊಂಗಲ್ ಹಬ್ಬವು ರಾಷ್ಟ್ರೀಯ ಸ್ಫೂರ್ತಿಯಾದ ‘ಒಂದು ಭಾರತ, ಶ್ರೇಷ್ಠ ಭಾರತ’ವನ್ನು ಪ್ರತಿಫಲಿಸುತ್ತದೆ ಹಾಗೂ ಈ ಭಾವನಾತ್ಮಕ ಸಂಪರ್ಕವನ್ನು ಕಾಶಿ ತಮಿಳು ಹಾಗೂ ಸೌರಾಷ್ಟ್ರ ತಮಿಳು ಸಂಘಗಳಲ್ಲಿ ಕಾಣಬಹುದು” ಎಂದು ರವಿವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರ ರಾಜಧಾನಿಯಲ್ಲಿರುವ ಕೇಂದ್ರ ಸಚಿವ ಎಲ್.ಮುರುಗನ್ ನಿವಾಸದಲ್ಲಿ ಪೊಂಗಲ್ ಸಂಭ್ರಮಾಚರಣೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮಿಳುನಾಡಿನ ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರಿಗೂ ಜೀವನದಲ್ಲಿ ಸಂತೋಷ, ಸಮೃದ್ಧಿ ಹಾಗೂ ಸಂತೃಪ್ತಿ ದೊರೆಯಲಿ ಎಂದು ಹಾರೈಸಿದರು.
Photo: x/@mygovindia
Photo: x/@mygovindia
Photo: x/@mygovindia