×
Ad

ಖತರ್ ಆಗಸದಲ್ಲಿ ಅಗ್ನಿ ಜ್ವಾಲೆ; ವಾಯುಪ್ರದೇಶ ಮುಚ್ಚಿದ ಸರಕಾರ

Update: 2025-06-23 22:23 IST

PC : X

ದೋಹಾ: ಖತರ್ ರಾಜಧಾನಿ ದೋಹಾದ ಆಗಸದಲ್ಲಿ ಅಗ್ನಿ ಜ್ವಾಲೆಗಳು ಕಾಣಿಸಿಕೊಂಡಿವೆ. ಅದು ವಾಯು ರಕ್ಷಣಾ ವ್ಯವಸ್ಥೆಯೋ ಅಥವಾ ಕ್ಷಿಪಣಿಗಳೋ ಎಂಬುದು ತಕ್ಷಣಕ್ಕೆ ತಿಳಿದಿಲ್ಲ ಎಂದು Aljazeera ವರದಿ ಮಾಡಿದೆ.

ಈ ಬೆಳವಣಿಗೆಗಳ ನಡುವೆ ಖತರ್ ಸರಕಾರವು ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿವುದಾಗಿ ಹೇಳಿದೆ.

ತನ್ನ ಪರಮಾಣು ತಾಣಗಳ ಮೇಲಿನ ದಾಳಿಯ ನಂತರ ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಈ ಹಿಂದೆ ಪದೇ ಪದೇ ಬೆದರಿಕೆ ಹಾಕಿದ್ದರಿಂದ ಈ ಬೆಳವಣಿಗೆ ನಡೆದಿದೆ ಎಂದು ವಿಶ್ಲೇಷಿಸಲಾಗಿದೆ.

ಇದಕ್ಕೂ ಮೊದಲು, ಖತರ್ನಲ್ಲಿರುವ ಅಮೆರಿಕ ಮತ್ತು ಬ್ರಿಟನ್ ರಾಯಭಾರ ಕಚೇರಿಗಳು ಖತರ್ ನಲ್ಲಿರುವ ತಮ್ಮ ನಾಗರಿಕರು ಮುಂದಿನ ಸೂಚನೆ ಬರುವವರೆಗೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಶಿಫಾರಸು ಮಾಡುವ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದವು.

ಖತರ್ ನ ಹಲವಾರು ಶಾಲೆಗಳನ್ನೂ ನಾಳೆಯವರೆಗೆ ಮುಚ್ಚಲು ಆದೇಶಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News